ಕರಾವಳಿ

ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿದ ಎಸ್.ಗಣೇಶ್ ರಾವ್

Pinterest LinkedIn Tumblr

ಮಂಗಳೂರು ; ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್.ಗಣೇಶ್ ರಾವ್ ಅವರು ತಮ್ಮ ಹುಟ್ಟುಹಬ್ಬವನ್ನು ಅನಾರೋಗ್ಯದಿಂದ ಬಳಲುತ್ತಿರುವ ಬಡವರಿಗೆ ಸಹಾಯಧನ ವಿತರಿಸುವ ಮೂಲಕ ವಿಶಿಷ್ಠವಾಗಿ ಆಚರಿಸಿದರು.

ಇತ್ತೀಚಿಗೆ ನಗರದ ಕೊಟ್ಟಾರ ಚೌಕಿಯಲ್ಲಿರುವ ಕರಾವಳಿ ಕಾಲೇಜು ಆವರಣದಲ್ಲಿ ನಡೆದ ಗಣೇಶ್ ರಾವ್ ಅವರ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ ಕರಾವಳಿ ಕಾಲೇಜು ಮತ್ತು ಎಸ್.ಗಣೇಶ್ ಫ್ಯಾನ್ಸ್ ಕ್ಲಬ್ ಸಹಯೋಗದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಡವರಿಗೆ ಸಹಾಯಧನ ವಿತರಣೆ ಮಾಡಲಾಯಿತು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಗಣೇಶ್ ರಾವ್ ಅವರು, ಮನುಷ್ಯ ತನ್ನ ವರ್ತನೆ ಮತ್ತು ಚಿಂತನೆಯಲ್ಲಿ ಬದಲಾವಣೆ ಮಾಡಿಕೊಂಡರೆ ಹೊಸತನ ಸಾಧಿಸಲು ಸಾಧ್ಯ. ಬಡವರು, ಕಷ್ಟದಲ್ಲಿರುವವರ ಕಣ್ಣೊರೆಸುವ ಮೂಲಕ ನಿರಂತರ ಮಾನವರಾಗಿ ಬದುಕಬೇಕು. ಮನುಷ್ಯನಿಗೆ ಅತ್ಮತೃಪ್ತಿ ಅತೀ ಅವಶ್ಯ. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವುದರ ಮೂಲಕ ಅತ್ಮತೃಪ್ತಿ ಹೊಂದಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸುಮಾರು 20 ಮಂದಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಇದೇ ವೇಳೆ ಜನ್ಮದಿನದ ಶುಭ ಕೋರಿದ ಅತಿಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರಾವಳಿ ಕಾಲೇಜು ಸಮೂಹದ ನಿರ್ದೇಶಕಿ ಲತಾ ಜಿ.ರಾವ್, ಎಸ್. ಗಣೇಶ್ ರಾವ್ ಫ್ಯಾನ್ಸ್ ಕ್ಲಬ್ ಅಧ್ಯಕ್ಷ ಅಶ್ವಿನ್ ಬಲ್ಲಾಳ್, ಕಾರ್ಯದರ್ಶಿ ಅಶ್ವಿತ್ ಕೊಟ್ಟಾರಿ, ಕೆಐಟಿ ಡೀನ್ ಡಾ. ಅಮರನಾಥ ಶೆಟ್ಟಿ, ಕರಾವಳಿ ಸಮೂಹ ಕಾಲೇಜುಗಳ ಪ್ರಾಂಶುಪಾಲರಾದ ಪ್ರೋ. ಆರ್.ಕೆ.ಭಟ್, ಡಾ. ಶ್ರೀದೇವಿ, ಪ್ರೋ. ನಾರಾಯಣ ಸ್ವಾಮಿ, ಪ್ರೋ. ಮೋಲಿ ಸಲ್ದಾನ, ಪ್ರೋ.ಮೋಹನ್ ನ್ಯಾಕ್, ಡಾ.ಹಿಮಾ ವಿವೇಕಾನಂದ್, ವೆಂಕಟ್ ರಾವ್ ಮುಂತಾದವರು ಉಪಸ್ಥಿತರಿದ್ದರು.

Comments are closed.