ಕರ್ನಾಟಕ

ತಂದೆಯ ಪಾರ್ಥಿವ ಶರೀರ ನೋಡಿ ಕುಸಿದು ಬಿದ್ದ ಪುಟ್ಟಣ್ಣಯ್ಯ ಪುತ್ರಿಯರು

Pinterest LinkedIn Tumblr

ಮಂಡ್ಯ: ಶಾಸಕ, ರೈತ ಮುಖಂಡ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರ ನೋಡಿ ಅಮೆರಿಕದಿಂದ ಆಗಮಿಸಿದ ಅವರ ಪುತ್ರಿಯರಾದ ಸ್ಮಿತಾ ಮತ್ತು ಅಕ್ಷತಾ ನೋವಿನಿಂದ ಕುಸಿದು ಬಿದ್ದರು.

ವಿದೇಶದಿಂದ ಪುತ್ರಿಯರು , ಸಂಬಂಧಿಕರು ಆಗಮಿಸಲಿದ್ದ ಕಾರಣ ಮೃತದೇಹವನ್ನು ಮೈಸೂರಿನ ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜಿನಲ್ಲಿ ಇರಿಸಲಾಗಿತ್ತು. ಇಂದು ಸ್ವಗ್ರಾಮ ಕ್ಯಾತನಹಳ್ಳಿಗೆ ತರಲಾಗಿದೆ.

ಕ್ಯಾತನಹಳ್ಳಿ ತೋಟದಲ್ಲಿ ಮೂವತ್ತು ರಾಜ್ಯಗಳ ರೈತರು ತಂದ ಮಣ್ಣು ಸೇರಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಯಾವುದೇ ವೈದಿಕ ಕಾರ್ಯಗಳಿಲ್ಲದೆ ಸಂಸ್ಕಾರ ನಡೆಯುವುದು.

Comments are closed.