
ಮಸ್ಕತ್: ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಓಮಾನ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿನ ಪ್ರಸಿದ್ಧ ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಮಸ್ಕತ್ನ ಮತ್ರಾ ಪ್ರದೇಶದಲ್ಲಿ ಈ ದೇವಾಲಯವಿದೆ. 125 ವರ್ಷಗಳ ಹಿಂದೆ ಗುಜರಾತ್ನ ವ್ಯಾಪಾರಿ ಸಮುದಾಯದವರು ಈ ದೇವಾಲಯವನ್ನು ಕಟ್ಟಿಸಿದ್ದರು. ಆ ನಂತರ 1999ರಲ್ಲಿ ಈ ದೇವಾಲಯದ ನವೀಕರಣ ಕಾರ್ಯ ನಡೆದಿತ್ತು.
ಈ ದೇವಾಲಯದ ಆವರಣದಲ್ಲಿ ಶ್ರೀ ಆದಿ ಮೋತೀಶ್ವರ್ ಮಹಾದೇವ, ಶ್ರೀ ಮೋತೀಶ್ವರ್ ಮಹಾದೇವ ಮತ್ತು ಶ್ರೀ ಹನುಮಾನ್ಜಿ ಗುಡಿಗಳಿವೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ 15 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ನಾಲ್ಕು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ನವದೆಹಲಿಗೆ ವಾಪಸ್ ಹೊರಟಿದ್ದಾರೆ.
Comments are closed.