
ಬೆಂಗಳೂರು: ಸರಕಾರದ ನೂತನ ಕನ್ನಡ ಧ್ವಜ ವಿರೋಧಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಒಂದು ಲಕ್ಷ ಮಂದಿ ಹಳದಿ ಕೆಂಪು ಬಾವುಟ ಹಿಡಿದು ಮೆರವಣಿಗೆ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಹೊಸ ಬಾವುಟ ಜಾರಿಗೆ ತಂದರೆ ದಂಗೆ ಏಳಬೇಕಾಗುತ್ತದೆ. ಕೆಂಪು ಹಳದಿ ಬಾವುಟವೇ ಅಂತಿಮ. ಸಮಿತಿ ಕೊಟ್ಟಿರುವ ಮೂರು ಬಣ್ಣದ ಬಾವುಟ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.
Comments are closed.