
ಬೆಳಗಾವಿ: ಅವಾಚ್ಯ ಶಬ್ದದಿಂದ ಬೈದ ಕಾರಣಕ್ಕೆ ತಮ್ಮ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ಇಲ್ಲಿನಿ ರಾಮತೀರ್ಥ ನಗರದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಊಟ ಮಾಡುತ್ತ ಅಣ್ಣ ಲೋಕೇಶ್ ಸಾಣಿಕೊಪ್ಪ ಹಾಗೂ ತಮ್ಮ ಸಂತೋಷ್ ಟಿ, ವಿ ನೋಡುತ್ತಿದ್ದಾರೆ. ಲೋಕೇಶ್ ಸಂತೋಷ್ಗೆ ಚಾನೆಲ್ ಬದಲಿಸುವಂತೆ ಹೇಳಿದ್ದಾರೆ ಆದರೆ ಇದಕ್ಕೆ ಅವರು ನಿರಾಕರಿಸಿದ್ದಾರೆ. ಈ ವೇಳೆ ಅವಾಚ್ಯ ಪದ ಬಳಸಿ ಲೋಕೇಶ್ ತಮ್ಮನನ್ನು ಬೈದಿದ್ದಾರೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿದೆ.
ತಾಯಿಯ ದುಡ್ಡಿನಲ್ಲಿ ತಿಂದು ತಿರುಗಾಡುತಿಯಾ,ಒಂದು ಉದ್ಯೋಗ ಮಾಡಲಿಕ್ಕೆ ಆಗುವುದಿಲ್ಲವಾ ಎಂದು ಲೋಕೇಶ್ಬೈದಿದ್ದಾರೆ. ಇದನ್ನು ಸಹಿಸದ ಸಂತೋಷ್ ಖಾರ ಕುಟ್ಟುವ ಕಲ್ಲಿನಿಂದ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಅಣ್ಣ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಆರೋಪಿ ಸಂತೋಷ್ನನ್ನು ಪೊಲೀಸರು ಬಂಧಿಸಿದ್ದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.