ಮುಖದ ಮೇಲೆ ಕೂದಲನ್ನು ತೆಗೆಯುವುದು ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಬ್ಯೂಟಿ ಪರ್ಲೋರ್. ಇಲ್ಲಿ ಕೂದಲನ್ನು ವ್ಯಾಕ್ಸ್ ಮೂಲಕ ಅಥವಾ ದಾರದ ಮೂಲಕ ತೆಗೆಯುತ್ತಾರೆ. ಆದರೆ ಇದು ಹೆಚ್ಚು ನೋವನ್ನುಉಂಟುಮಾಡುತ್ತದೆ ಹಾಗೂ ಕೆಲವೊಂದು ಬಾರಿ ಗಾಯಗಳಾಗುವ ಸಾಧ್ಯತೆ ಹೆಚ್ಚು. ಇನ್ನು ಹೆಚ್ಚು ದುಡ್ಡಿರುವ ಜನರು ಲೇಸರ್ ಮೂಲಕ ತಮ್ಮ ದೇಹ ಹಾಗು ಮುಖದ ಕೂದಲನ್ನು ತೆಗೆಸುತ್ತಾರೆ. ಇವನೆಲ್ಲಾ ಹೊರತು ಪಡಿಸಿ, ಮನೆಯಲ್ಲೇ ಮಾಡಬಹುದಾದ ಸುಲಭ ಹಾಗು ಆರೋಗ್ಯಕರ ವಿಧಾನವನ್ನು ತಿಳಿಯೋಣ ಬನ್ನಿ.
೧. ತುಳಸಿ ಹಾಗು ಈರುಳ್ಳಿ
ಹೀಗೂ ಮಾಡಬಹುದಾ ಎಂದು ನೀವು ಯೋಚಿಸುತ್ತಿದ್ದೀರಾ? ಹೌದು, ಇದು ತುಂಬಾ ಸುಲಭ ಹಾಗು ಪರಿಣಾಮಕಾರಿ ವಿಧಾನ.
ಬೇಕಾಗುವ ಸಾಮಗ್ರಿಗಳು.
೧ ಈರುಳ್ಳಿ
೧೦ ತುಳಸಿ ಎಲೆಗಳು.
ಮಾಡುವ ವಿಧಾನ
ಮೊದಲಿಗೆ ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿಕೊಳ್ಳಿ. ನಂತರ ಕತ್ತರಿಸಿದ ಅರ್ಧ ಈರುಳ್ಳಿಯ ಹೊರ ಪದರವನ್ನು ತೆಗೆದುಕೊಂಡು ಮೇಲೆ ಹೇಳಿದ ತುಳಸಿ ಎಲೆಯೊಂದಿಗೆ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ೧೫ ನಿಮಷಗಳ ನಂತರ ತೊಳೆದುಕೊಳ್ಳಿ.
ವಾರಕ್ಕೆ ೨-೩ ಬಾರಿ ನೀವು ಇದನ್ನು ಪ್ರಯೋಗಿಸಿದರೆ ೧ ತಿಂಗಳಲ್ಲಿ ನಿಮ್ಮ ಮುಖದ ಮೇಲಿನ ಕೂದಲಿನ ಬೆಳವಣಿಗೆ ಕಡಿಮೆಯಾಗಿರುತ್ತದೆ.
೨. ಮೊಟ್ಟೆಯ ಬಿಳಿಯ ಭಾಗ
ಬೇಕಾಗುವ ಸಾಮಗ್ರಿಗಳು
೧ ಮೊಟ್ಟೆ.
೧ ಚಮಚ ಕಾರ್ನ್ ಸ್ತಾರ್ಚ್
೧ ಚಮಚ ಸಕ್ಕರೆ ಪುಡಿ.
ಮಾಡುವ ವಿಧಾನ.
ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಒಂದು ಬಟ್ಟಲಿಗೆ ತೆಗೆದುಕೊಳ್ಳಿ, ಇದಕ್ಕೆ ೧ ಚಮಚ ಕಾರ್ನ್ ಸ್ತಾರ್ಚ್ ಹಾಗು ೧ ಚಮಚ ಸಕ್ಕರೆಯ ಪುಡಿಯನ್ನು ಬೆರಿ, ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ, ಒಣಗುವ ವರೆಗೆ ಹಾಗೆ ಬಿಡಿ. ನಂತರ ಚರ್ಮವನ್ನು ಭಿಗಿಯಾಗಿ ಹಿಡಿದು
ಒಣಗಿದ ಪೇಸ್ಟ್ ಅನ್ನು ಎಳೆಯಿರಿ. ಪೇಸ್ಟನೊಂದಿಗೆ ನಿಮ್ಮ ಮುಖದ ಕೂದಲು ಸಹ ಬರುತ್ತದೆ.
೩. ಆಲುಗಡ್ಡೆ ಹಾಗೂ ಹೆಸರು ಬೇಳೆ.
ಬೇಕಾಗುವ ಸಾಮಗ್ರಿಗಳು
೧ ಆಲುಗಡ್ಡೆ.
೧ ಕಪ್ ಹೆಸರು ಬೇಳೆ.
೪ ಚಂಚ್ಗ ನಿಂಬೆ ಹಣ್ಣಿನ ರಸ.
೧ ಚಮಚ ಜೀನು ತುಪ್ಪ.
ಮಾಡುವ ವಿಧಾನ
೧ ಕಪ್ ಹೆಸರು ಬೀಳೆಯನ್ನು ರಾತ್ರಿ ನೆನಸಿಡಿ. ಮರುದಿನ ಇದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಹಾಗೆ, ೧ ಆಲುಗಡ್ಡೆಯ ಸಿಪ್ಪಿ ತೆಗೆದು, ಅದನ್ನು ತುರಿದು ಅದರ ರಸವನ್ನು ಒಂದೆಡೆ ತೆಗೆದಿಡಿ. ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ೨೦ ನಿಮಷಗಳ ನಂತರ ಮುಖವನ್ನು ಉಜ್ಜಿ. ಇದರಿಂದ ಪುಡಿಯೊಂದಿಗೆ ಕೂದಲು ಸಹ ಕೆಳಗೆ ಉದುರುತ್ತದೆ. ಇದನ್ನು ನೀವು ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು. ಆಲುಗಡ್ಡೆ ಪ್ರಾಕೃತಿಕ ಬ್ಲೀಚಿಂಗ್ ಏಜೆಂಟ್ ರೀತಿ ಕೆಲಸ ಮಾಡುತ್ತದೆ.
೪. ಓಟ್ಸ್ scrub
ಬೇಕಾಗುವ ಸಾಮಗ್ರಿಗಳು
೧ ಚಮಚ ಓಟ್ಸ್.
೧ ಚಮಚ ಜೇನುತುಪ್ಪ.
೧ ಚಮಚ ನಿಮ್ಬ್ನಿಮ್ಬೆ ಹಣ್ಣು
ಮಾಡುವ ವಿಧಾನ
ಮೇಲೆ ಹೇಳಿದ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ. ೧೫-೨೦ ನಿಮಿಷಗಳ ನಂತರ ಮುಖವನ್ನು ವೃತ್ತಾಕಾರದಲ್ಲಿ ಉಜ್ಜಿ ತೊಳೆಯಿರಿ. ಇದನ್ನು ವಾರಕ್ಕೆ ೨-೩ ಬಾರಿ ಮಾಡಬಹುದು.
೫. ಮನೆಯಲ್ಲೇ ತಯಾರಿಸಿದ ವ್ಯಾಕ್ಸ್
ಪರ್ಲೋರ್ ಗೆ ಹೋಗದೆ ನಿಮ್ಮ ಮುಖ, ಕೆನ್ನೆಯ ಮೇಲಿನ ಕೂದಲನ್ನು ತೆಗೆಯಬೇಕೇ?. ಇಲ್ಲಿದೆ ನೋಡಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ವ್ಯಾಕ್ಸ್.
ಬೇಕಾಗುವ ಸಾಮಾಗ್ರಿಗಳು
೧ ಚಮಚ ಸಕ್ಕರೆ
೧/೨ ಜೇನುತುಪ್ಪ
ಸ್ವಲ್ಪ ನಿಂಬೆ ಹಣ್ಣಿನ ರಸ.
ಮಾಡುವ ವಿಧಾನ
ಮೇಲೆ ಹೇಳಿದ ಸಾಮಗ್ರಿಗಳನ್ನು ಒಂದು ಬಟ್ಟಲಿಗೆ ತೆಗೆದುಕೊಂಡು, ಅದನ್ನು ಸ್ಟವ್ ನಲ್ಲಿ ಬಿಸಿ ಮಾಡಿ. ಪೇಸ್ಟ್ ಹಳದಿ ಬಣ್ಣ ತಿರುಗುವವರೆಗೆ ಅದನ್ನು ಬಿಸಿ ಮಾಡಿ. ಸ್ವಲ್ಪ ಬಿಸಿ ಇದ್ದ ಹಾಗೆ ಅದನ್ನು ನಿಮ್ಮ ಮುಖದ ಕೂದಲಿರುವ ಜಾಗಕ್ಕೆ ಹಚ್ಚಿ, ಒಂದು ತೆಳುವಾದ ಬಟ್ಟೆ ಅಥವಾ ವ್ಯಾಕ್ಸ್ ಸ್ಟ್ರಿಪ್ನ ಮೂಲಕ ನಿಧಾನವಾಗಿ ಎಳೆಯಿರಿ. ಕೂದಲಿಂದ ವಿರುದ್ಧ ದಿಕ್ಕಿನಲ್ಲಿ ಎಳೆದರೆ ಕೂದಲು ಬೇಗನೆ ಕಿತ್ತು ಬರುತ್ತದೆ.

Comments are closed.