ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಮೂರು ತೇರುಗಳ ಉತ್ಸವ ನಡೆಯಿತು.ಪರ್ಯಾಯತೋತ್ಸವದ ಸಂಭ್ರಮದಲ್ಲಿರುವ ಉಡುಪಿಯ ಜನರಿಗೆ, ಈ ಬಾರಿಯ ಸಂಕ್ರಾತಿ ಡಬಲ್ ಖುಷಿಯನ್ನ ನೀಡಿದೆ. ಒಂದೆಡೆ ಮಕರ ಸಂಕ್ರಮಣ ಸಂಭ್ರಮವಾದರೆ ಮತ್ತೊಂದೆಡೆ ಮಧ್ವಚಾರ್ಯರು ಶ್ರಿ ಕೃಷ್ಣನನ್ನು ಪ್ರತಿಷ್ಟಾಪಿಸಿದ ದಿನ ,ಹೀಗಾಗಿ ಶ್ರೀಕೃಷ್ಣನ ಪ್ರತಿಷ್ಟಾಪನ ದಿನದ ಅಂಗವಾಗಿ ವೈಭವದ ಮೂರು ರಥಗಳ ಉತ್ಸವ ನಡೆಯಿತು.

ಇದಕ್ಕೂ ಮೊದಲು ಶ್ರೀ ಕೃಷ್ಣನ ಉತ್ಸವ ಮೂರ್ತಿಯನ್ನು, ಅಲಂಕರಿಸಿದ ತೆಪ್ಪದಲ್ಲಿರಿಸಿ ಮಠದ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯ್ತು.ನಂತರ ಬ್ರಹ್ಮ ರಥದಲ್ಲಿ ಉತ್ಸವ ಮೂರ್ತಿಯನ್ನಿರಿಸಿ ರಥ ಬೀದಿಯಲ್ಲಿ ಉತ್ಸವ ಮಾಡಲಾಯಿತು.
ಕೃಷ್ಣಮಠದ ಪರ್ಯಾಯ ಶ್ರೀಪಾದರಾದ ಶ್ರೀ ಪೇಜಾವರ ಶ್ರೀಪಾದರು ಸೇರಿದಂತೆ ಇತರ ಮಠಾಧೀಶರುಗಳು ಶ್ರೀ ಕೃಷ್ಣನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದರು. ಉಡುಪಿಯ ಬ್ರಹ್ಮರಥವನ್ನು ಶ್ರೀಕೃಷ್ಣನ ಮಕರ ಸಂಕ್ರಾತಿಯಂದು ಮಾತ್ರ ಹೊರ ತೆಗೆಯಲಾಗುತ್ತೆ , ಹೀಗಾಗಿ ಬ್ರಹ್ಮ ರಥದಲ್ಲಿ ರುವ ಶ್ರೀಕೃಷ್ಣನನ್ನು ನೋಡಲು ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು, ಅಲಂಕೃತಗೊಂಡ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡಿಕೊಂಡರು.
ಇದೇ ಸಂಧರ್ಭದಲ್ಲಿ ರಥಬೀದಿಯಲ್ಲಿ ಸಿಡಿಸಿದ ಬಣ್ಣಬಣ್ಣದ ಸಿಡಿಮದ್ದು ಪ್ರದರ್ಶನ ನೆರೆದಿದ್ದ ಭಕ್ತರಿಗೆ ಸಖತ್ ಖುಷಿ ಕೊಟ್ಟಿತ್ತು. ಒಟ್ಟಿನಲ್ಲಿ ಪರ್ಯಾಯ ಸಂಭ್ರಮದಲ್ಲಿರುವ ಉಡುಪಿ ಜನತೆಗೆ ,ಮಕರ ಸಂಕ್ರಮಣದ ಉತ್ಸವವು ಭಕ್ತಿ ಸಾಗರದಲ್ಲಿ ಮುಳುಗುವಂತೆ ಮಾಡಿದೆ .
Comments are closed.