ಜ್ವರ ಬಂದರೆ ಸಾಕು, ಸುಸ್ತು, ಮೈಕಯ್ಯಿ ನೋವು, ತಲೆ ನೋವು ಇವೆಲ್ಲಾ ಲಕ್ಷಣಗಳು ಒಟ್ಟಿಗೆ ಬರುತ್ತವೆ. ಜ್ವರ ಎಂದರೆ ಏನು? ನಿಮ್ಮ ದೇಹದೊಳಗೆ ಸೇರಿದ ರೋಗಾಣುವನ್ನು ಹೊಡೆದೋಡಿಸಲು ನಿಮ್ಮ ದೇಹ ಸಾಕಷ್ಟು ಪ್ರಯತ್ನಿಸುತ್ತಿರುತ್ತದೆ. ಇದರ ಲಕ್ಷಣವೇ ಜ್ವರ . ಮೆಡಿಕಲ್ ಶಾಪ್ನಲ್ಲಿ ಸಿಗುವ ಔಷಧಿಗಳು ರೋಗವನ್ನು ನಿವಾರಿಸಿದರೂ, ಇದರಿಂದ ದುಷ್ಪರಿಣಾಮಗಳೇ ಹೆಚ್ಚು. ಸುಲಭವಾಗಿ ಲಭ್ಯವಾಗುವಂತ ಪ್ಯಾರಸಿಟಮಾಲ್, ibuprofen, tylenol ಗಳನ್ನು ಸೇವಿಸುವ ಬದಲು ಮನೆಯಲ್ಲೇ ತಯಾರಿಸಿದ ಮದ್ದುಗಳ್ಳನ್ನು ಸೇವಿಸುವುದು ಸೂಕ್ತ. ಇದರೊಂದಿಗೆ ವಿಶ್ರಾಂತಿಯನ್ನು ಪಡಿಯಿರಿ. ಜೊತೆಗೆ ಬಿಸಿ ನೀರಿನ ಸ್ನಾನದಿಂದ ಆಗುವ ಪ್ರಯೋಜನಗಳೇನೆಂದು ತಿಳಿಯೋಣ ಬನ್ನಿ.
ಜ್ವರಕ್ಕೆ ಕಾರಣಗಳೇನು
ದೇಹದ ತಾಪಮಾನ ೧೦೪ ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಹೋದರೆ, ಇದರ ಅರ್ಥ ನಿಮಗೆ
೧. ಇನ್ಫೆಕ್ಷನ್
೨. ಸೂಕ್ಷ್ಮರೋಗಾಣುವಿನಿಂದ ಸೋಂಕು.
೩. ಸ್ತ್ರೆಪ್ ಥ್ರೋಟ್.
೪. ಹೊಟ್ಟೆಯ ರೋಗಾಣು.
೫. ದೊಡ್ಡ ಕಾಯಿಲೆಗಳಾದ ಕ್ಯಾನ್ಸರ್, HIV ಪೀಡಿತ ವ್ಯಕ್ತಿಗಳ್ಳಲಿ ಕಂಡುಬರುತ್ತದೆ.
ಜ್ವರದ ಲಕ್ಷಣಗಳೇನು
೧. ತಲೆನೋವು.
೨. ಮೈ-ಕಯ್ಯಿ ನೋವು.
೩. ಸುಸ್ತು-ಸಂಕಟ
೪. ವಾಂತಿ
೫. ಕಣ್ಣುಗಳಲ್ಲಿ ನೋವು.
೬. ಭ್ರಮೆಯಲ್ಲೀ ತೇಲುವುದು ಪುಟ್ಟ ಮಕ್ಕಳ್ಳಲ್ಲಿ ಸಾಮಾನ್ಯ.
ಜ್ವರದಲ್ಲಿ ಸ್ನಾನ
ನಮ್ಮ ಅಜ್ಜಿ ನಮಗೆ ಜ್ವರದಲ್ಲಿ ಸ್ನಾನ ಮಾಡಬಾರದು ಎಂದು ಹೇಳಿದ್ದರು . ಹಾಗೆ ಮಾಡಿದರೆ ಜ್ವರ ಮತ್ತಷ್ಟು ಜಾಸ್ತಿಯಾಗುತ್ತದೆ ಎಂದು. ಆದರೆ, ಹೊಸ ಸಂಶೋಧನೆಯ ಪ್ರಕಾರ ಉಗುರು ಬೆಚ್ಚ್ಜಗಿನ ನೀರಿನಲ್ಲಿ ಸ್ನಾನ ಮಾಡಿದರೆ ಜ್ವರ ಬೇಗನೆ ಗುಣವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
– ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ಚಳಿ ಕಾಣಿಸಿಕೊಂಡಲ್ಲಿ, ಕೂಡಲೇ ಸ್ನಾನ ಮುಗಿಸಿ ಹೊರಗೆ ಬನ್ನಿ.
– ಬೆಚ್ಚಗಿನ ಬಟ್ಟೆಗಳನ್ನು ಧರಿಸಿ, ಮಲಗಿ ವಿಶ್ರಮಿಸಿ.
– ಹರ್ಬಲ್ ಕಷಾಯವನ್ನು ಕುಡಿಯಿರಿ
– ಸ್ನಾನ ಮಾಡಲು ಆಗದಷ್ಟು ಸುಸ್ತು ಇದ್ದರೆ, ಸ್ಪಂಜು ಅನ್ನು ಬಿಸಿ ನೀರಿನಲ್ಲಿ ಅದ್ದಿ ಕಂಕುಳ ಕೆಳಗೆ, ಹಸ್ತ ಪಾದಗಳಿಗೆ ಒರೆಸಿ.
– ಸಾಕಷ್ಟು ಬಿಸಿ ನೀರನ್ನು ಕುಡಿಯಿರಿ.
– ಜ್ವರ 104 ಡಿಗ್ರಿ ಗಿಂತ ಮೇಲೆ ಹೋದರೆ ಮಾತ್ರ ಔಷಧ ಸೇವಿಸಿ.
– ಬಿಸಿ ನೀರಿಗೆ ಜಜ್ಜಿಗ ಬೆಳ್ಳುಳ್ಳಿಯನ್ನು ಬೆರೆಸಿ, ಅದರ ನೀರನ್ನು ಸೇವಿಸಿ.
ಮೇಲೆ ಹೇಳಿದ ಎಲ್ಲಾ ವಿಧಾನಗಳನ್ನು ಅನುಸರಿಸಿದರೂ, ಜ್ವರ ವಾಸಿಯಾಗದೇ ಇದ್ದಾಗ, ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Comments are closed.