ಆರೋಗ್ಯ

ಗರ್ಭಿಣಿ ಮಹಿಳೆ ಸಂಗೀತ ಕೇಳುವುದರಿಂದಾಗುವ 5 ಅದ್ಭುತ ಪ್ರಯೋಜನ

Pinterest LinkedIn Tumblr

ಹಾಡುಗಳು ಮನಸ್ಸನ್ನು ಉಲ್ಲಾಸದಿಂಡುತ್ತದೆ. ಸಂಗೀತವನ್ನು ಇಷ್ಟಪಡದವರಿಲ್ಲ. ಪುಟ್ಟ ಮಕ್ಕಳಿನಿಂದ ಹಿಡಿದು ವಯಸ್ಸಾದವರು ಸಹ ಸಂಗೀತವನ್ನು ಇಷ್ಟ ಪಡುತ್ತಾರೆ. ಆದರೆ ಸಂಗೀತದ ಸ್ವರ, ರಾಗಗಳು ಬೇರೆಯಷ್ಟೇ. ಹೌದು ಗರ್ಭಾವಸ್ಥೆಯಲ್ಲಿ ಸಂಗೀತ ಕೇಳುವುದರಿಂದ ಒಳಗಿರುವ ನಿಮ್ಮ ಪುಟ್ಟ ಕೂಸು ಎಷ್ಟು ಖುಷಿ ಪಡುತ್ತದೆ ಎಂದು ನಿಮಗೆ ಗೊತ್ತೇ? ಗರ್ಭಸಂಸ್ಕಾರ ಅಂದರೆ ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವಿನಿಂದಲೇ, ಅದಕ್ಕೆ ಶಿಕ್ಷಣ ನೀಡುವುದು ಎಂದರ್ಥ. ಮಕ್ಕಳು ತಾಯಿಯ ಹೊಟ್ಟೆಯೊಳಗಿರುವಾಗಲೇ ಎಲ್ಲವನ್ನು ಗ್ರಹಿಸಿ, ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಹಾಗಾದರೆ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸಂಗೀತ ಕೇಳುವುದರಿಂದಾಗುವ ಪ್ರಯೋಜನಗಳೇನೆಂದು ತಿಳಿಯೋಣ ಬನ್ನಿ.

೧. ಮಗುವಿನ ಶಬ್ಧಗ್ರಹಿಕೆಯನ್ನು ವೃದ್ಧಿಸುತ್ತದೆ
earphones/headphones ಬಳಸಿ ಸಂಗೀತವನ್ನು ಆಲಿಸುವುದರಿಂದ ಮಗುವಿಣ ಶಬ್ದ ಗ್ರಹಿಕೆಯ ಶಕ್ತಿ ಹಾಗು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಏನು ಅರ್ಥವಾಗದೆ ಇದ್ದರು, ಹಾಡುಗಳಿಂದ ಹೊರಬರುವ ಶಬ್ದ ಗಳಿಗೆ ಕಿವಿ ಕೊಟ್ಟು ಕೇಳುತ್ತವೆ, ಇದರಿಂದ ಮಗುವಿನ ಗ್ರಹಣ ಶಕ್ತಿ ಮತ್ತಷ್ಟು ವೃದ್ಧಿಸುತ್ತದೆ.

೨. ಮಗುವಿನ ಚಳವಲನ ವೃದ್ಧಿಸುತ್ತದೆ
ನೀವು ಹಾಡುಗಳನ್ನು ಆಲಿಸುವಾಗ, ಶಬ್ದ ಹಾಗು ತಾಳಗಳ ಅನುಗುಣವಾಗಿ ಮಗು ಹೊಟ್ಟೆಯೊಳಗೆ ಚಲನೆ ಮಾಡುವುದು, ಕಾಲಿನಿಂದ ಹೊಟ್ಟೆಗೆ ಓದಿಯುವುದನ್ನು ಮಾಡುತ್ತದೆ. ಇದು ಶಬ್ಧಗಳಿಗೆ ಮಗು ಹೇಗೆ ಪ್ರತಿಕ್ರಯಿಸುತ್ತದೆ ಎಂದು ತಿಳಿಸುತ್ತದೆ.

೩. ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ
ಕೇವಲ ಮಾನಸಿಕವಲ್ಲ, ಶಾರೀರಿಕ ಬೆಳವಣಿಗೆಗೂ ಸಂಗೀತ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕರ್ಕಶ ಹಾಡುಗಳು ಮಗುವನ್ನು ಕೊಪೂದ್ರೆಕನನ್ನಾಗಿ ಮಾಡುತ್ತದೆ, ಆದರೆ ಮೃದು ಸಂಗೀತ ಮಗುವಿನ ಮನಸ್ಸನ್ನು ತಿಳಿಗೊಳಿಸಿ ಹುಟ್ಟಿದ ನಂತರ ಜೋಗುಳದಂತೆ ಅನ್ನಿಸಿ ನಿದ್ರೆಗೆ ಜಾರುತ್ತದೆ.

೪. ಮಗುವಿನ ಮನಸ್ಸಿನ ಒತ್ತಡ ಕಡಿಮೆಗೊಳಿಸುತ್ತದೆ
ಒತ್ತಡ ಕೇವಲ ದೊಡ್ದವರಿಗಲ್ಲ, ಹೊಟ್ಟೆಯಲ್ಲಿರುವ ನಿಮ್ಮ ಕಂದಮ್ಮಗಳು ಕೂಡ ಒತ್ತಡಕ್ಕೆ ಒಳಗಾಗುತ್ತವೆ. ಸಂಗೀತ ಕೇಳುವುದರಿಂದ ಮಗುವಿನ ಮನಸ್ಸು ಪ್ರಶಾಂತವಾಗಿ, ಚೆನ್ನಾಗಿ ನಿದ್ರೆ ಮಾಡುತ್ತದೆ.

೫. ಹುಟ್ಟಿದ ನಂತರ, ಜೋಗುಳದಂತೆ
ಗರ್ಭಾವಸ್ಥೆಯಲ್ಲಿ ತಾಯಿ ಸಂಗೀತ ಕೇಳಿದರೆ, ಮಗುವಿನ ಮೆದುಳು ಅದನ್ನು ಗ್ರಹಿಸಿ ನೆನಪಿನಲ್ಲಿ ಉಳಿಸಿಕೊಂಡಿರುತ್ತದೆ. ಹುಟ್ಟಿದ ನಂತರ ಅದೇ ಹಾಡನ್ನು ನೀವು ಮಗುವಿನ ಕೋಣೆಯಲ್ಲಿ ಕೇಳಿದರೆ ಮಗು ಸುಲಭವಾಗಿ ನಿದ್ರೆಗೆ ಜಾರುತ್ತದೆ. ಇವೆಲ್ಲವುದರಿಂದ ನಮಗೆ ತಿಳಿದುಬರುವುದು, ತಾಯಿ ಗರ್ಭಾವಸ್ಥೆಯಲ್ಲಿ ಮಾಡುವ ಕೆಲಸಗಳು, ಅವಳ ಮನಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಗರ್ಭಾವಸ್ಥೆಯನ್ನು ಸಂತೋಷದಿಂದ ಅನುಭವಿಸಿ.

Comments are closed.