ಮಕ್ಕಳು ನೋಡಲು ಗುಂಡು ಗುಂಡಾಗಿ, ಮುದ್ದು ಮುದ್ದಾಗಿ ಕಂಡರೆ ಚೆನ್ನಾಗಿರುತ್ತದೆ. ಆದರೆ ಮಕ್ಕಳು ನೋಡ ನೋಡುತ್ತಲೇ ಬೆಳೆದು ಬಿಡುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಸಣ್ಣಗಾಗುತ್ತಾರೆ. ಇದು ಸಹಜ. ಆದರೆ, ಇದ್ದಕ್ಕಿದ್ದ ಹಾಗೆ ದೇಹದ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ, ಪೋಷಕರು ಎಚ್ಚರ ವಹಿಸಬೇಕು. ಕೂಡಲೇ, ಮಕ್ಕಳ ತಜ್ಞರನ್ನು ಕಾಣಬೇಕು. ಅಸಹಜವಾಗಿ ಮಕ್ಕಳಲ್ಲಿ ತೂಕ ಕಡಿಮೆಯಾದರೆ ಅದಕ್ಕೆ ಕಾರಣಗಳೇನೆಂದು ಹುಡುಕೋಣ ಬನ್ನಿ.
೧. ಸೋಂಕು
ಮಕ್ಕಳ್ಳಲ್ಲಿ ಇದು ಸಹಜವಾಗಿದೆ. ಪೋಷಕರು ಮಕ್ಕಳ್ಳನ್ನು ಎಷ್ಟೇ ಸೂಕ್ಷ್ಮವಾಗಿ ನೋಡಿಕೊಂಡರೂ, ಹೊಟ್ಟೆಯೊಳಗೆ ಜಂತು ಹುಳುವಿನ ಸಮಸ್ಯೆ, ಹೊಟ್ಟೆ ನೋವು ಮುಂತಾದ ರೋಗಗಳಿಂದ ದೂರ ಇರಿಸುವುದು ಕಷ್ಟ. ಹೊಟ್ಟೆಯೊಳಗೆ ಜಂತು ಹುಳುಗಳು ಮಗುವಿನ ಪೌಷ್ಟಿಕ ಆಹಾರವನ್ನು ದೇಹಕ್ಕೆ ಸೇರದ ಹಾಗೆ ಮಾಡಿ, ಮಕ್ಕಳ್ಳಲ್ಲಿ ದೇಹದ ತೂಕವನ್ನು ಕುಗ್ಗಿಸುತ್ತದೆ. ಆದ್ದರಿಂದ ಮಗು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಕೂಡಲೇ ವೈದ್ಯರ ಬಳಿ ಕರೆದು ಕೊಂಡು ಹೋಗಿ.
೨. ಹೆಚ್ಚಿದ ಶಾರೀರಿಕ ವ್ಯಾಯಾಮ
ವ್ಯಾಯಾಮ ಎಂದ ಕೂಡಲೇ ದೊಡ್ಡವರು ಮಾಡುವ ವ್ಯಾಯಮ ನೆನಪಿಗೆ ಬಂತಾ? ಅಲ್ಲಾ! ಮಕ್ಕಳು ಅಂಬೆಗಾಲಿಡುತ್ತ, ಮನೆಯ ತುಂಬಾ ಓಡಾಡುವುದು ಅಥವಾ ಪುಟ್ಟ ಪುಟ್ಟ ಹೆಜ್ಜೆಗಳ್ಳನ್ನಿಡುತ್ತ ಮನೆಯೆಲ್ಲಾ ತಿರುಗಾಡುವುದು, ಒಂದು ರೀತಿಯ ವ್ಯಾಯಾಮ. ಹೀಗೆ ತಮ್ಮ ದೇಹದ ಶಕ್ತಿಗೂ ಮೀರಿ ನಡೆದಾದುವುದರಿಂದ ಮಕ್ಕಳು ಕ್ರಮೇಣವಾಗಿ ಸಣ್ಣಗಾಗುತ್ತಾರೆ.
೩. ಎದೆ ಹಾಲು ಕುಡಿಯುವ ಮಕ್ಕಳ್ಳಲ್ಲಿ ತೂಕ ಕಡೆಮೆಯಾಗುವುದು
– ತಾಯಿಯ ಹಾಲನ್ನು, ಮಗು ಕುಡಿಯಲು ಶುರು ಮಾಡಿದ ಕೂಡಲೇ ಬರುವ ಹಾಲಿನ್ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಹಾಗು ಪ್ರೋಟೀನ್ ಇರುವುದಿಲ್ಲ. ಆದರೆ, ಹಾಲು ಕುಡಿಯಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಬರುವ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳಿರುತ್ತದೆ ಎಂದು ವೈದ್ಯಕೀಯ ಸಂಶೋಧನೆಯೊಂದು ಧೃಢಪಡಿಸಿದೆ. ಆದ್ದರಿಂದ, ತಾಯಂದಿರೇ ನಿಮ್ಮ ಮಗುವಿಗೆ ಹೆಚ್ಚಿನ ಸಮಯದವರೆಗೆ ಹಾಲುಣಿಸುವುದನ್ನು ಮರೆಯದಿರಿ.
– ಎದೆ ಹಾಲು ಬಿಡಿಸಿದ ಮಕ್ಕಳು ಸಣ್ಣಗಾಗುತ್ತಾರೆ. ಇದಕ್ಕೆ ಕಾರಣವಿಷ್ಟೇ, ತಾಯಿಯ ಹಾಲಿನಲ್ಲಿ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮಗುವಿಗೆ ದೊರೆಯುತ್ತಿತ್ತು, ಆದರೆ ಎದೆ ಹಾಲು ನಿಲ್ಲಿಸಿದ ಮೇಲೆ, ಅದರ ಬದಲಾಗಿ ಹಣ್ಣು, ತರಕಾರಿ, ಮಾಂಸ , ಮೊಟ್ಟೆಯನ್ನು ಮಗುವಿಗೆ ಆಹಾರದಲ್ಲಿ ಬಳಸಬೇಕು.
– ಹುಟ್ಟಿದ ಮಕ್ಕಳಲ್ಲಿ ದೇಹದ ತೂಕ ಕಡಿಮೆ ಇದ್ದರೆ, ಅದು ಕುಪೋಷಣೆಯಿಂದ ಆಗಿರುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ತಾಯಂದಿರು ಮಕ್ಕಳಿಗೆ ಸರಿಯಾದ ಸಮಯಕ್ಕೆ ಎದೆ ಹಾಲನ್ನು ನೀಡಬೇಕು. ಇದರಿಂದ ಮಕ್ಕಳು ಅವರ ದೇಹದ ಅನುಗುಣವಾಗಿ ತೂಕವನ್ನು ಹೊಂದಲು ಸಾಧ್ಯವಾಗುತ್ತದೆ.
– ಮತ್ತೆ ಕೆಲವು ಮಕ್ಕಳಿಗೆ ಎಷ್ಟೇ ಚೆನ್ನಾಗಿ ಆಹಾರ, ನಿದ್ರೆ ಎಲ್ಲವನ್ನು ನೀಡಿ ಆರೈಕೆ ಮಾಡಿದರೂ, ಸಣ್ಣಗಿರುತ್ತಾರೆ. ಇದಕ್ಕೆ ಕಾರಣ, ಅವರ ತಂದೆ ತಾಯಿಯ ವಂಶವಾಹಿ ಎಂದು ವೈದ್ಯರು ಹೇಳುತ್ತಾರೆ.
ಹಾಗಾಗಿ ನಿಮ್ಮ ಮಗು ಸದಾ ಚಟುವಟಿಕೆಯಿಂದ ಆಟವಾಡುತ್ತಿದ್ದರೆ, ಸರಿಯಾದ ಸಮಯಕ್ಕೆ ಆಹಾರವನ್ನು ನೀಡುವುದನ್ನು ಮರೆಯದಿರಿ. ಎರಡು ಭೋಜನದ ನಡುವೆ ಜಾಸ್ತಿ ಸಮಯ ನೀಡದೆ, ಮಗುವಿಗೆ ಲಘು ಭೋಜನ ನೀಡುವುದನ್ನು ಅಭ್ಯಸಿಸಿ.
ವೈದ್ಯರನ್ನು ನೀವು ಯಾವಗ ಕಾಣಬೇಕು
೧. ಮಗು ವಿಪರೀತ ಸುಸ್ತಾದ ರೀತಿ ಕಂಡ ಕೂಡಲೇ.
೨. ಲವಲವಿಕೆಯಿಂದ ಆಟವಾಡದೆ ಇದ್ದಾಗ.
೩. ಊಟ ಮಾಡದೆ ಇದ್ದಾಗ.
೪. ಹೊಟ್ಟೆ ನೋವು ಮತ್ತು ಜ್ವರದಿಂದ ಬಳಲಿದಾಗ.
೫. ಮೂತ್ರ ವಿಸರ್ಜನೆ ಮಾಡದಿದ್ದಾಗ ಹಾಗು ಮೂತ್ರ ಅರಿಶಿನ ಬಣ್ಣಕ್ಕೆ ತಿರುಗಿದಾಗ.
೬. ಮಲವಿಸರ್ಜಿಸುವಾಗ ರಕ್ತ ಕಂಡುಬಂದರೆ.
ಈ ಮೇಲಿನ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈ ಯಲ್ಲಿದೆ. ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Comments are closed.