ಆರೋಗ್ಯ

ತೂಕ ಇಳಿಸುವ ರೆಸಲ್ಯೂಶನ್‌ ನಿಮ್ಮದೇ?

Pinterest LinkedIn Tumblr


2018 ಬಂದೇ ಬಿಡ್ತು, ಹೊಸ ವರ್ಷಕ್ಕೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬ ರೆಸಲ್ಯೂಶನ್‌ ಸಾಕಷ್ಟು ಇರುತ್ತವೆ.

ಅದರಲ್ಲೂ ಈ ವರ್ಷ ತೂಕ ಕಮ್ಮಿ ಮಾಡಿ, ಆಕರ್ಷಕ ಮೈ ಕಟ್ಟಿನಿಂದ ಮಿಂಚುತ್ತೇನೆ, ಅದಕ್ಕಾಗಿ ಇಂದಿನಿಂದ ಕಟ್ಟುನಿಟ್ಟಾದ ಡಯಟ್‌ ಪಾಲಿಸುತ್ತೇನೆ ಎಂದು ಅಂದುಕೊಳ್ಳುವವರೇ ಜಾಸ್ತಿ. ಆದರೆ ಆರಂಭದಲ್ಲಿ ಇರುವ ಜೋಶ್ ಬರ್ತಾ ಬರ್ತಾ ಇಲ್ಲವಾಗುವುದು, ಮತ್ತೆ ಮುಂದಿನ ವರ್ಷ ಮೈ ತೂಕ ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಹಾಗಾಗುವುದು ಬೇಡ, ಈ ವರ್ಷ ಮೈ ತೂಕ ಇಳಿಸುತ್ತೇನೆ ಎಂಬ ದೃಢ ನಿರ್ಧಾರ ನಿಮ್ಮಲ್ಲಿದ್ದರೆ ಈ ಡಯಟ್‌ ನಿಮ್ಮ ಸಂಕಲ್ಪ ಈಡೇರಿಸುವಲ್ಲಿ ಸಹಾಯ ಮಾಡುತ್ತೆ ನೋಡಿ:

1. ನಿಮ್ಮ ತಟ್ಟೆಯಲ್ಲಿ ಅನ್ನಕ್ಕಿಂತ ಹೆಚ್ಚು ತರಕಾರಿ ಇರಲಿ
ಅನ್ನವನ್ನು ತಿನ್ನುವುದನ್ನು ಕಡಿಮೆ ಮಾಡಿ ಅದರ ಬದಲಿಗೆ ತರಕಾರಿಗಳನ್ನು ಹೆಚ್ಚು ತಿನ್ನಿ. ಪಲ್ಯ , ಸಲಾಡ್ ರೀತಿ ಮಾಡಿ ತಿನ್ನಬಹುದು.

ಹೀಗೆ ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ, ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುವುದಿಲ್ಲ.

2. ಸ್ಯಾಕ್ಸ್‌ಗೆ ಕುರುಕುಲುತಿಂಡಿ ಬದಲು ಡ್ರೈ ಫ್ರೂಟ್ಸ್ ತಿನ್ನಿ
ಕುರುಕುಲು ತಿಂಡಿ ಬದಲಿಗೆ ಡ್ರೈ ಫ್ರೂಟ್ಸ್‌ ತಿನ್ನುವುದರಿಂದ ಬಾಯಿಗೆ ರುಚಿ, ಆರೋಗ್ಯಕ್ಕೆ ಒಳ್ಳೆಯದು.

3. ಊಟವನ್ನು ಮೂರು ಬಾರಿ ಬದಲು ಆರು ಬಾರಿ ತಿನ್ನಿ
ನೀವು ಬೆಳಗ್ಗೆ ಎರಡು ದೋಸೆ ತಿನ್ನುವವರಾದರೆ ಬೆಳಗ್ಗೆ 1 ದೋಸೆ ತಿಂದು 10 ಗಂಟೆಗೆ ಮತ್ತೊಂದು ದೋಸೆ ತಿನ್ನಿ. ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ತೆಗೆದುಕೊಳ್ಳುವುದು ಕೂಡ ತೂಕ ಇಳಿಕೆ ಸಹಕಾರಿ.

ರಾತ್ರಿ ಮಲಗುವ ಎರಡು ಗಂಟೆಗೆ ಮುಂಚೆ ನಿಮ್ಮ ಊಟ ಮುಗಿಸಿ.
ತರಕಾರಿ-ಹಣ್ಣುಗಳು ಮೈ ತೂಕವನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ತ್ವಚೆ ಸೌಂದರ್ಯ ಹೆಚ್ಚುವುದು.

Comments are closed.