
ಮೈಸೂರು: ಅಪರೂಪದ ಘಟನೆ ಎಂಬಂತೆ ಸಹೋದರಿಯನ್ನೇ ಪ್ರೀತಿಸಿ ಮದುವೆಯಾಗಿದ್ದ ಯುವಕ ನೇಣಿಗೆ ಶರಣಾಗಿದ್ದಾನೆ.
ಸುತ್ತೂರು ನಿವಾಸಿ ರಸಿಕ(23) ಮೃತ. 3 ತಿಂಗಳ ಹಿಂದೆಯಷ್ಟೇ ತಾಯಿಯ ಅಕ್ಕನ ಮಗಳು ಕಾವ್ಯಾ ಎಂಬಾಕೆಯನ್ನು ಪ್ರೀತಿಸಿ ರಸಿಕ ಮದುವೆಯಾಗಿದ್ದ. ಸಂಬಂಧದಲ್ಲಿ ಕಾವ್ಯ ಸಹೋದರಿಯಾಗುತ್ತಾಳೆ ಎಂದು ಎರಡೂ ಮನೆಯವರ ವಿರೋಧ ಇತ್ತು.
ವಿರೋಧವನ್ನು ಲೆಕ್ಕಿಸದೆ 3 ತಿಂಗಳ ಹಿಂದೆ ನಂಜನಗೂಡು ದೇಗುಲದಲ್ಲಿ ಇಬ್ಬರೂ ವಿವಾಹವಾಗಿದ್ದರು. ಮದುವೆಯಾದ ಮೂರು ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಇದರಿಂದ ಬೇಸತ್ತ ರಸಿಕ, ಕಾವ್ಯಾಳ ಸ್ವಗ್ರಾಮ ಕೋಚನಹಳ್ಳಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.