ಕರ್ನಾಟಕ

ಮೋದಿ ಫೋಟೋ ಹಾಕಲು ಮುಂದಾಗಿ: ಯಡಿಯೂರಪ್ಪ

Pinterest LinkedIn Tumblr


ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ಸಿಗುವ ಅಕ್ಕಿ-ಗೋಧಿಯನ್ನು ಉಚಿತವಾಗಿ ನೀಡುವ ಮೂಲಕ ಅನ್ನಭಾಗ್ಯ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಕೇಂದ್ರದ ಬಹುತೇಕ ನೆರವು ಹಿನ್ನೆಲೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಂದು ಕೆ.ಜಿ. ಅಕ್ಕಿಯನ್ನು 33 ರೂ.ಗೆ ಖರೀದಿಸಿ ರಾಜ್ಯಕ್ಕೆ 3 ರೂ.ಗೆ ಕೆ.ಜಿ.ಯಂತೆ ನೀಡುತ್ತದೆ. ಅದೇ ಅಕ್ಕಿಯನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯದಡಿ ಉಚಿತವಾಗಿ ನೀಡಿ ತಮ್ಮ ಸರ್ಕಾರದ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇದನ್ನು ತಡೆಯಲು ಕಾರ್ಯಕರ್ತರು ಮುಂದಾಗಬೇಕು ಎಂದರು.

-ಉದಯವಾಣಿ

Comments are closed.