ರಾಷ್ಟ್ರೀಯ

ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿ ಹೋಗಿ: ಸಲಫಿ ಗುರು

Pinterest LinkedIn Tumblr


ಕೋಯಿಕ್ಕೋಡ್‌: ಮುಸ್ಲಿಂ ವೈದ್ಯರು ರೆಡ್‌ಕ್ರಾಸ್‌ ಸಂಕೇತ ಮತ್ತು ಕಾಯಿಲೆ ವಾಸಿ ಮಾಡುವ ಗ್ರೀಕ್‌ ದೇವರು ಅಸ್ಕಲೆಪಿಯುಸ್‌ ಸಂಕೇತಗಳನ್ನು ಬಳಸಬಾರದು ಎಂದು ವಿವಾದಿತ ಸಲಫಿ ಗುರು ಅಬ್ದುಲ್‌ ಮುಹ್‌ಸಿನ್‌ ಅಯಿದೀದ್‌ ಹೇಳಿದ್ದಾರೆ. ಇದು ಇಸ್ಲಾಂನ ಏಕ ದೇವ ಉಪಾಸನೆಗೆ ವಿರುದ್ಧ ಎಂದು ಅವರು ಹೇಳಿದ್ದಾರೆ.

‘ಸಮ್‌ ಇಸ್ಲಾಮಿಕ್‌ ಅಡ್ವೈಸ್‌ ಟು ಡಾಕ್ಟರ್ಸ್‌’ ಎಂಬ ಶೀರ್ಷಿಕೆಯಡಿ ಈ ಸಂದೇಶವನ್ನು ಅಬ್ದುಲ್‌ ಮುಹ್‌ಸಿನ್‌ ಪೋಸ್ಟ್‌ ಮಾಡಿದ್ದಾರೆ. ವೈದ್ಯರು ಮಹಿಳಾ ರೋಗಿಗಳನ್ನು ಮುಟ್ಟಬಾರದು ಮತ್ತು ಆಸ್ಪತ್ರೆ ಹಾಗೂ ಕನ್ಸಲ್ಟಿಂಗ್‌ ರೂಂಗಳಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಇರುವುದನ್ನು ಉತ್ತೇಜಿಸಬಾರದು ಎಂದು ಅವರು ಹೇಳಿದ್ದಾರೆ.

ರೆಡ್‌ಕ್ರಾಸ್‌ ಮತ್ತುಅಸ್ಕಲೆಪಿಯುಸ್‌ ಸಂಕೇತಗಳು ಮೂರ್ತಿ ಪೂಜೆಗೆ ಸಂಬಂಧಿಸಿದ್ದು ವೈದ್ಯರ ಮನೆಗಳು, ವಾಹನಗಳು, ಚಿಕಿತ್ಸಾ ಕೊಠಡಿಗಳು, ಔಷಧಿ ಚೀಟಿಗಳಲ್ಲಿ ಈ ಸಂಕೇತಗಳು ಇರುವುದು ಸರಿಯಲ್ಲ, ಅವೆಲ್ಲವು ಇಸ್ಲಾಂಗೆ ವಿರೋಧವಾದುದು ಎಂದು ಅವರು ತಿಳಿಸಿದ್ದಾರೆ.

ಮುಸ್ಲಿಂ ಮಹಿಳಾ ರೋಗಿಯು ಮುಸ್ಲಿಂ ಮಹಿಳಾ ವೈದ್ಯರು ಇಲ್ಲವಾದರೆ ಮುಸ್ಲಿಂ ಪುರುಷ ವೈದ್ಯರ ಬಳಿ ಹೋಗಬೇಕು. ವೈದ್ಯರು ಮಹಿಳೆಯರನ್ನು ಮುಟ್ಟಬಾರದು, ಮುಟ್ಟಲೇ ಬೇಕಾದ ಸನ್ನಿವೇಶ ಎದುರಾದರೆ ಕೈಗೆ ಗ್ಲೌಸ್‌ ಬಳಸಬೇಕು ಎಂದು ಹೇಳಿದ್ದಾರೆ.

ತಪಾಸಣೆ ಅಗತ್ಯವಿಲ್ಲದ ದೇಹದ ಭಾಗವನ್ನು ಮಹಿಳೆ ಸಂಪೂರ್ಣ ಮುಚ್ಚಿಕೊಂಡಿರಬೇಕು. ಇಸ್ಲಾಂ ಪ್ರಕಾರ ಏಕಾಂಗಿ ಪುರುಷನ ಜತೆ ಏಕಾಂಗಿ ಮಹಿಳೆ ಇರಬಾರದು, ತಪಾಸಣೆ ವೇಳೆ ಮಹಿಳಾ ರೋಗಿ ಜತೆ ಮತ್ತೊಬ್ಬ ಮಹಿಳೆ ಇರಬೇಕು. ಸೌಂದರ್ಯ ಹೆಚ್ಚಿಸಲು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಲು ಇಸ್ಲಾಂನಲ್ಲಿ ಅವಕಾಶವಿಲ್ಲ ಎಂದು ಉಪದೇಶಿಸಿದ್ದಾರೆ.

Comments are closed.