
ಮನುಷ್ಯನ ದೇಹದಲ್ಲಿನ ಹೆಚ್ಚು ಪ್ರಮಾಣದ ಬೊಜ್ಜಿನಿಂದಾಗಿ ಹೃದಯಾಘಾತದಂತ ಕಾಯಿಲೆಗಳಿಗೆ ಗುರಿಯಾಗುತ್ತಾನೆ. ಆದರೆ, ಉತ್ತಮ ಬೊಜ್ಜು ಅಥವಾ ಕಡಿಮೆ ಪ್ರಮಾಣದ ಬೊಜ್ಜು ಸಹ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ನೂತನ ಅಧ್ಯಯನ ತಿಳಿಸಿದೆ.
ಹೆಚ್ಚು ಸಾಂದ್ರತೆಯುಳ್ಳ ಲಿಪೊಪ್ರೋಟಿನ್ ಅಥವಾ ಬೊಜ್ಕಿನಿಂದಾಗಿಯೂ ವ್ಯಕ್ತಿಗಳು ಹೃದಯಾಘಾತ, ಕ್ಯಾನ್ಸರ್ ಮತ್ತು ಇತರೆ ಕಾಯಿಲೆಗಳಿಂದ ಸಾವಿಗೀಡಾಗುವ ಸಾಧ್ಯತೆಯಿದೆ ಎಂಬುದನ್ನು ಕೆನಡಾದ ಟೊರೆಂಟೊ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಕುರಿತಾಗಿ ನಡೆಸಿದ ಸಂಶೋಧನೆಯಲ್ಲಿ 40ರಿಂದ 105 ವರ್ಷದೊಳಗಿನ 6 ಲಕ್ಷ 31 ಸಾವಿರ ವ್ಯಕ್ತಿಗಳು ಭಾಗಿಯಾಗಿದ್ದರು.
Comments are closed.