
ಬೆಂಗಳೂರು: ರಾಜರಾಜೇಶ್ವರಿನಗರದ ಐಡಿಯಲ್‌ಹೋಮ್ಸ್‌ಬಡಾವಣೆಯಲ್ಲಿ ನಟ ದರ್ಶನ್‌ಅವರ ಮನೆ ಹಾಗೂ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ 7 ಎಕರೆ, 31 ಗುಂಟೆ ಒತ್ತುವರಿ ಪ್ರದೇಶದಲ್ಲಿರುವ ಎಲ್ಲ ಕಟ್ಟಡಗಳನ್ನು ವಶಕ್ಕೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.
ಐಡಿಯಲ್‌ಹೋಮ್ಸ್‌ಬಡಾವಣೆಯಲ್ಲಿ ಒಟ್ಟಾರೆ 194 ಕಟ್ಟಡ, ಮನೆಗಳಿವೆ. ‘ಭೂದಾಖಲೆಗಳ ಜಂಟಿ ನಿರ್ದೇಶಕರ ವರದಿ ಕೈಸೇರಿದ್ದು, ಲಭ್ಯವಿರುವ ಕಂದಾಯ ದಾಖಲೆಗಳನ್ನೂ ಪರಿಶೀಲಿಸಿದ್ದೇವೆ. ಐಡಿಯಲ್‌ಹೋಮ್ಸ್‌ಬಡಾವಣೆಯು ‘ಬಿ’ ಖರಾಬು ಜಾಗದಲ್ಲಿ ಇರುವುದು ದೃಢಪಟ್ಟಿದೆ. ಹೀಗಾಗಿ ಒತ್ತುವರಿ ಮಾಡಿಕೊಂಡ ಎಲ್ಲ ಕಟ್ಟಡಗಳನ್ನೂ ಶೀಘ್ರವೇ ವಶಕ್ಕೆ ಪಡೆಯಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿ’ ಖರಾಬು ಭೂಮಿಯಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಅವಕಾಶವಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಜುಲೈ 28ರಂದು ನಗರದಲ್ಲಿ ಮಹಾಪೂರ ಉಂಟಾದ ಬಳಿಕ ಭೂದಾಖಲೆಗಳ ಇಲಾಖೆಯಿಂದ ರಾಜಕಾಲುವೆಗಳ ಸರ್ವೇ ಮಾಡಿಸಲಾಗಿತ್ತು. ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಯಪ್ರಕಾಶ್‌ಅವರು ಇತ್ತೀಚೆಗೆ ಸರ್ವೇ ವರದಿಯನ್ನು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್‌ಪ್ರಸಾದ್‌ಅವರಿಗೆ ಸಲ್ಲಿಸಿದ್ದರು.
‘ದರ್ಶನ್‌ಅವರ ಮನೆ, ಎಸ್.ಎಸ್. ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಈ ಕಟ್ಟಡಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಹೈಕೋರ್ಟ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರಿಂದ ಎಲ್ಲ ದಾಖಲೆಗಳನ್ನು ನಗರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದರು.
‘ಬಿಬಿಎಂಪಿಯಿಂದ ನಮಗೆ ಇದುವರೆಗೆ ಯಾವುದೇ ದಾಖಲೆಗಳು ಬಂದಿಲ್ಲ. ಆದರೆ, ಕಂದಾಯ ದಾಖಲೆಗಳನ್ನು ತಪಾಸಣೆ ನಡೆಸಿದಾಗ ಒತ್ತುವರಿ ಆಗಿರುವುದು ದೃಢಪಟ್ಟಿದೆ’ ಎಂದು ಶಂಕರ್‌ತಿಳಿಸಿದರು.
ಐಡಿಯಲ್‌ಹೋಮ್ಸ್‌ಬಡಾವಣೆಗೆ 1969ರಲ್ಲಿ ಬೆಂಗಳೂರು ನಗರ ಸುಧಾರಣಾ ಟ್ರಸ್ಟ್‌ಮಂಡಳಿಯಿಂದ (ಸಿಐಟಿಬಿ) ಅನುಮೋದನೆ ಸಿಕ್ಕಿತ್ತು. 1989ರಲ್ಲಿ ಬಡಾವಣೆಯ ಪರಿಷ್ಕೃತ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಅನುಮತಿ ದೊರೆತಿತ್ತು.
‘ಬಿ’ ಖರಾಬು ಪ್ರದೇಶ ಒತ್ತುವರಿ ಮಾಡಿಕೊಂಡಿರುವ ಕಾರಣ ಬಡಾವಣೆ ನಿರ್ಮಾಣಕ್ಕೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು 2003ರಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಕುರಿತು ತನಿಖೆ ನಡೆಸುವಂತೆ ಬಿಡಿಎ ಹಾಗೂ ನಗರ ಜಿಲ್ಲಾಡಳಿತಕ್ಕೆ ಕೋರ್ಟ್‌ಸೂಚನೆ ನೀಡಿತ್ತು.
Comments are closed.