ಗಲ್ಫ್

ಶಾರ್ಜಾದಲ್ಲಿ ನಾಳೆ ಗೊರುಚ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮಧ್ಯಪ್ರಾಚ್ಯ ಕನ್ನಡ ಸಮ್ಮೇಳನ; ಸಚಿವೆ ಉಮಾಶ್ರೀಗೆ ‘ಧ್ವನಿ ಶ್ರೀರಂಗ’ ಪ್ರಶಸ್ತಿ ಪ್ರದಾನ

Pinterest LinkedIn Tumblr

madya

ದುಬೈ(ಯುಎಇ ) : ಇಲ್ಲಿನ ‘ಧ್ವನಿ ಪ್ರತಿಷ್ಠಾನ’ದ ಆಶ್ರಯದಲ್ಲಿ ಎರಡನೇ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಮಧ್ಯಾಹ್ನ ಶಾರ್ಜಾದಲ್ಲಿ ನಡೆಯಲಿದೆ.

ಒಂದು ದಿನ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸರೂ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರೂ ಆಗಿರುವ ಡಾ.ಗೊ.ರು. ಚನ್ನಬಸಪ್ಪ ವೇದಿಕೆ ಅಲಂಕರಿಸಲಿದ್ದಾರೆ.

ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಬರಗೂರು ರಾಮಚಂದ್ರಪ್ಪ, ಯು.ಎ.ಇ ಎಕ್ಸ್‌ಚೆಂಜ್‌ಅಧ್ಯಕ್ಷ ವೈ.ಸುಧೀರ್‌ಕುಮಾರ್ ಶೆಟ್ಟಿ, ಫಾರ್ಚೂನ್ ಹೋಟೆಲ್‌ಸಮೂಹದ ಅಧ್ಯಕ್ಷ ಪ್ರವೀಣಕುಮಾರ್‌ಶೆಟ್ಟಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಭಾಗವಹಿಸುತ್ತಾರೆ ಎಂದು ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್‌ರಾವ್‌ಪಯ್ಯಾರ್‌ತಿಳಿಸಿದ್ದಾರೆ.

ಶಾರ್ಜಾ ಎಕ್ಸ್‌ಪೋ ಸೆಂಟರ್‌ನ ಸಭಾಂಗಣದಲ್ಲಿ ನಡೆಯುವ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ‘ಸಾಹಿತ್ಯ ಮತ್ತು ಸಮಕಾಲೀನತೆ’, ಜರಗನಹಳ್ಳಿ ಶಿವಶಂಕರ್‌ಅಧ್ಯಕ್ಷತೆಯಲ್ಲಿ ‘ಕಾವ್ಯಧಾರೆ’, ಪದ್ಮರಾಜ ದಂಡಾವತಿ ಅಧ್ಯಕ್ಷತೆಯಲ್ಲಿ ‘ಮಾಧ್ಯಮ ಮತ್ತು ಇತ್ತೀಚಿನ ಸವಾಲುಗಳು’ ಹಾಗೂ ಸರ್ವೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ಅನಿವಾಸಿ ಅಂತರಾತ್ಮ’ ಗೋಷ್ಠಿಗಳು ನಡೆಯಲಿವೆ.

ಈ ಎಲ್ಲ ಗೋಷ್ಠಿಗಳಲ್ಲಿ ಮಧ್ಯಪ್ರಾಚ್ಯದ ದುಬೈ, ಅಬುಧಾಬಿ, ಕತಾರ್‌ಮತ್ತು ಕುವೈತ್‌ನ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ಇದೇ ಸಮಯದಲ್ಲಿ ಸಚಿವೆ ಉಮಾಶ್ರೀ ಅವರಿಗೆ ‘ಧ್ವನಿ ಶ್ರೀರಂಗ’ ಹಾಗೂ ಕಪ್ಪಣ್ಣ ಅವರಿಗೆ ‘ಧ್ವನಿ ಅಂತರ ರಾಷ್ಟ್ರೀಯ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಗುವುದು ಎಂದು ಪಯ್ಯಾರ್‌ ತಿಳಿಸಿದ್ದಾರೆ.

Comments are closed.