ಅಂತರಾಷ್ಟ್ರೀಯ

ವಾಟ್ಸ್ಆ್ಯಪ್, ಫೇಸ್‌ಬುಕ್‌ ಮಾದರಿಯ ಇನ್ನೊಂದು ಮೆಸೇಜಿಂಗ್‌ ಆ್ಯಪ್‌!

Pinterest LinkedIn Tumblr

allo

ನವದೆಹಲಿ: ಸಂವಹನ ಕ್ಷೇತ್ರದಲ್ಲಿ ದಿನ ದಿನವೂ ಹೊಸ ಸಂಶೋಧನೆಗಳಾಗುತ್ತಲೇ ಇವೆ. ಸದ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದು ಫೇಸ್‌ಬುಕ್‌ಮತ್ತು ವಾಟ್ಸ್‌ಆ್ಯಪ್‌. ಅವೆರಡನ್ನು ವಿಶ್ವದ ಕೋಟ್ಯಂತರ ಜನ ಬಳಕೆ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಗೂಗಲ್‌ಕೂಡ ಪ್ರವೇಶ ಮಾಡಿದ್ದು, ‘ಅಲ್ಲೋ’ ಎಂಬ ಮೆಸೇಜಿಂಗ್‌ಆ್ಯಪ್‌ಅನ್ನು ಅಭಿವೃದ್ಧಿಪಡಿಸಿ ಬಳಕೆಗೆ ಅನುವು ಮಾಡಿಕೊಟ್ಟಿದೆ ಎಂದು ‘ಗ್ಯಾಜೆಟ್‌ನೌ’ ವರದಿ ಮಾಡಿದೆ.

ಹೊಸ ಮೆಸೇಜಿಂಗ್‌ಆ್ಯಪ್‌ಬಗ್ಗೆ ಈ ವರ್ಷದ ಆರಂಭದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ಸಮ್ಮೇಳನದಲ್ಲಿ ಗೂಗಲ್‌ಘೋಷಣೆ ಮಾಡಿತ್ತು. ಅಲ್ಲೋ ಗೂಗಲ್‌ನೆರವಿನಿಂದಲೇ ಕೆಲಸ ಮಾಡುತ್ತದೆ. ಫೇಸ್‌ಬುಕ್‌ನ ವಾಟ್ಸ್‌ಆ್ಯಪ್‌ನಂತೆಯೇ ಅದು ಕೆಲಸ ಮಾಡುತ್ತದೆ. ಮೊಬೈಲ್‌ಬಳಕೆದಾರರು ನೀಡುವ ಸಂಖ್ಯೆಯನ್ನೇ ಅದು ಗುರುತಿನ ಸಂಖ್ಯೆಯನ್ನಾಗಿ ಪರಿಗಣಿಸುತ್ತದೆ. ಗೂಗಲ್‌ಖಾತೆಗಳನ್ನೂ ಕೂಡ ಅದಕ್ಕೆ ಲಿಂಕ್‌ಮಾಡಲು ಅವಕಾಶ ಉಂಟು. ಒಂದು ತಿಂಗಳ ಹಿಂದೆ ಅದು ಬಿಡುಗಡೆಯಾಗಿದೆ. ಗೂಗಲ್‌ಪ್ಲೇಸ್ಟೋರ್‌ಮೂಲಕ ವಿಶ್ವಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅದನ್ನು ಬಳಕೆ ಮಾಡುತ್ತಿದ್ದಾರೆಂದು ಗೂಗಲ್‌ಹೇಳಿಕೊಂಡಿದೆ.

ಹೊಸ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ವಿಶೇಷತೆ ಏನೆಂದರೆ ಚಾಟ್‌ವಿಂಡೋವನ್ನು ಬಿಟ್ಟು ಹೋಗದೆ ಅದರಲ್ಲಿಯೇ ಇರುವ ಸಚ್‌ರ್‍ಎಂಜಿನ್‌ಲ್ಲಿ ಶೋಧಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿರುವಂತೆ ಗೂಢಲಿಪ್ಯಂತೀಕರಣ (ಎನ್‌ಕ್ರೈಪ್ಶನ್‌) ವನ್ನು ಅಲ್ಲೋದಲ್ಲಿಯೂ ನೀಡಲಾಗಿದೆ. ಮಾತ್ರವಲ್ಲದೆ ಚಾಟ್‌ಮಾಡಿದ್ದು ಅಗತ್ಯವಿಲ್ಲದೇ ಅವುಗಳನ್ನು ಡಿಲೀಟ್‌ಮಾಡುವ ಅವಕಾಶವೂ ಇದೆ. ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಚಾಟ್‌ಅನ್ನು ಸ್ವಯಂ ಚಾಲಿತವಾಗಿ ಡಿಲೀಟ್‌ಮಾಡುವುದಕ್ಕೆ ಸಮಯ ನಿಗದಿಗೂ ಅವಕಾಶ ಮಾಡಿಕೊಡಲಾಗಿದೆ.

ಇದರ ಜತೆಗೆ ಆಯಾ ದೇಶಕ್ಕೆ ಅನುಕೂಲಕ್ಕೆ ತಕ್ಕಂತೆ ಎಮೋಜಿಗಳ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಅದರಲ್ಲಿರುವ ಕೊರತೆ ಏನೆಂದರೆ ಡಾಕ್ಯುಮೆಂಟ್‌ಶೇರಿಂಗ್‌, ಕಾಲ್‌ವ್ಯವಸ್ಥೆ ಇಲ್ಲ. ಆದರೆ ಇವೆರಡು ವಾಟ್ಸ್‌ಆ್ಯಪ್‌ನಲ್ಲಿವೆ. ಗೂಗಲ್‌ಹೇಳಿಕೆ ಪ್ರಕಾರ ಶೀಘ್ರವೇ ಆ್ಯಪ್‌ಗೆ ವಿಡಿಯೋ ಕಾಲಿಂಗ್‌ವ್ಯವಸ್ಥೆಯನ್ನು ಅಳವಡಿಸಲಿದೆ.

Comments are closed.