ಕರ್ನಾಟಕ

ಯೂಸ್ಡ್ ಬೈಕ್‍ಗೆ ಖರೀದಿಯ ಮುನ್ನ ನೂರು ಬಾರಿ ಯೋಚಿಸಿ

Pinterest LinkedIn Tumblr

bike

ಮಂಗಳೂರು: ಬೈಕ್ ಸವಾರಿ ಮಾಡೋದು ಅಥವಾ ತಮ್ಮದೇ ಆದ ಸ್ವಂತ ಬೈಕ್ ಇಟ್ಟುಕೊಳ್ಕೋದು ಎಲ್ಲರ ಕಾಮನ್ ಆಸೆಯಾಗಿರುತ್ತೆ. ಆದ್ರೆ ಎಲ್ಲರಿಗೂ ಹೊಸಬೈಕ್ ಖರೀದಿಸುವ ಶಕ್ತಿ ಇರೋದಿಲ್ಲ ನೋಡಿ. ಹಾಗಾಗಿ ಸೆಕೆಂಡ್ ಹ್ಯಾಂಡ್ ಬೈಕ್ ಅಥವಾ ಯೂಸ್ಡ್ ಬೈಕ್‍ಗೆ ಮಾರು ಹೋಗೋದು ಸಹಜ. ಆದ್ರೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸೋದು ಅಷ್ಟು ಸುಲಭದ ಮಾತಲ್ಲ. ಸೆಕೆಂಡ್ ಹ್ಯಾಂಡ್ ಬೈಕ್ ಖರಿಸೋರಿಗೆ ಇಲ್ಲಿದೆ ಕೆಲ ಟಿಪ್ಸ್.

1. ಆದಷ್ಟು ಪರಿಚಿತರಿಂದಲೇ ಗಾಡಿ ಖರೀದಿಸಿ. ತೀರಾ ಪರಿಚಯವೇ ಇಲ್ಲದವ್ರ ಹತ್ರ ಗಾಡಿ ಖರೀದಿಸೋದು ಒಳಿತಲ್ಲ. ಗಾಡಿ ಮಾರೋರು ಯಾವ ಕಾರಣಕ್ಕೆ ಗಾಡಿ ಮಾರ್ತಾ ಇದಾರೆ ಎಂದು ತಿಳಿದುಕೊಳ್ಳಿ. ಯಾಕೆಂದ್ರೆ ಕೆಲವ್ರು ಹಣದ ಅವಶ್ಯಕತೆ ಇದ್ದು ಅನಿವಾರ್ಯವಾಗಿ, ಒಳ್ಳೆಯ ಗಾಡಿ ಮಾರಲು ಮುಂದಾಗಿರ್ತಾರೆ. ಆದ್ರೆ ಇನ್ನೂ ಕೆಲವ್ರು ಗಾಡಿ ತೀರಾ ಹಳತಾಗಿ, ಕೆಟ್ಟುಹೋದಾಗ ಅದಕ್ಕೆ ಪಾಲಿಶ್ ಮಾಡಿ, ಬಣ್ಣಕ್ಕೆ ಮರುಳಾಗುವಂತೆ ಮಾಡಿ ಮಾರಾಟಕ್ಕೆ ಇಟ್ಟಿರುತ್ತಾರೆ.
2. ವಾಹನದ ದಾಖಲೆ ಪತ್ರಗಳನ್ನು ಸರಿಯಾಗಿ ಪರಿಶೀಲಿಸಿ. ಆರ್‍ಟಿಒ, ತೆರಿಗೆ ರಿಜಿಸ್ಟ್ರೇಷನ್, ಹೀಗೆ ಮುಂತಾದ ಪತ್ರಗಳನ್ನು ಸರಿಯಾಗಿ ಪರಿಶೀಲಿಸಿ. ಒಟ್ಟಾರೆ ವಾಹನದ ಇತಿಹಾಸವನ್ನು ಖುದ್ದಾಗಿ ತಿಳಿದುಕೊಳ್ಳಿ.
3. ಸೆಕೆಂಡ್ ಹ್ಯಾಂಡ್ ಬೈಕ್‍ಗಳ ಡೀಲರ್‍ಗಳು ಬೈಕ್‍ಗೆ ವಾರಂಟಿ ನೀಡುತ್ತಾರೆಯೇ ಎಂದು ತಿಳಿದುಕೊಳ್ಳಿ.
4. ತುಂಬಾ ಹಳೆಯ ಬೈಕ್‍ಗಳ ಸಹವಾಸವೇ ಬೇಡ.
5. ಗಾಡಿಯ ಎಂಜಿನ್ ಗಾತ್ರ ನೋಡಿಕೊಳ್ಳಿ.
6. ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ಖರಿದಿಸುವ ಮುನ್ನ ಟೆಸ್ಟ್ ಡ್ರೈವ್ ಮಾಡಿ. ಎಂಜಿನ್ ಸೌಂಡ್, ಗೇರ್ ಬಾಕ್ಸ್ ಚೆಕ್ ಮಾಡಿಕೊಳ್ಳಿ.
7. ಸೆಕೆಂಡ್ ಹ್ಯಾಂಡ್ ಬೈಕ್‍ನ ಖರೀದಿಸುವ ಮುನ್ನ ನಿಮ್ಮ ಪರಿಚಿತ ಮೆಕ್ಯಾನಿಕ್ ಹತ್ತಿರ ತೋರಿಸಿ.
8. ಒಂದೇ ಡೀಲರ್ ಹತ್ತಿರ ಹೋಗದೇ ಬೇರೆ ಬೇರೆ ಕಡೆ ಮಾಡಲ್‍ಗಳನ್ನು ಅದರ ಬೆಲೆಯನ್ನು ತಿಳಿದುಕೊಳ್ಳಿ.
9. ಸೆಕೆಂಡ್ ಹ್ಯಾಡ್ ಬೈಕ್‍ಗಳನ್ನು ಚೆನ್ನಾಗಿ ಪಾಲಿಷ್ ಮಾಡಿ, ಮಾರಾಟಕ್ಕೆ ಇಟ್ಟಿರುತ್ತಾರೆ. ಇನ್ನೇನು ಆಗ ತಾನೇ ಶೋ ರೂಮ್‍ನಿಂದ ಬಂದ ಬೈಕ್ ನಂತೆ ಇರುತ್ತೆ. ಆದ್ರೆ ಬೈಕ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿ.
10. ಇದೆಲ್ಲದಕ್ಕೂ ಮುನ್ನ ನಿಮ್ಮ ಬಜೆಟ್ ಎಷ್ಟು ಎಂದು ನಿಗದಿ ಪಡಿಸಿ, ಅದ್ರ ಅನುಗುಣವಾಗಿ ಬೈಕ್ ಖರೀದಿಸಲು.

Comments are closed.