
ಬಳ್ಳಾರಿ: ಮಳೆಗಾಗಿ ಪ್ರಾರ್ಥಿಸಿ, ಜೀವಂತ ವ್ಯಕ್ತಿಯನ್ನೇ ಶವದಂತೆ ಕುಳ್ಳಿರಿಸಿ, ಅಂತ್ಯಕ್ರಿಯೆ ವಿಧಾನ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆಯನ್ನು ಕೂಡ್ಲಿಗಿ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಮಾಡಲಾಗಿದೆ.
ಮಳೆ ಬಾರದೇ ಇರುವುದರಿಂದ ಗ್ರಾಮದಲ್ಲಿ ಗುರುವಾರ ಈ ವಿಶಿಷ್ಟ ಆಚರಣೆ ನೆರವೇರಿಸಲಾಗಿದೆ.
ಆಚರಣೆ ಮಾಡುವ ಪದ್ಧತಿ: ವಿವಾಹಿತ ವೃದ್ಧರೊಬ್ಬರನ್ನು ಶವದಂತೆ ಕುಳ್ಳಿರಿಸಿ ಪೂಜೆ ಮಾಡಿ, ಮೆರವಣಿಗೆ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡುಹೋಗಿ ಅಂತ್ಯಸಂಸ್ಕಾರ ಕ್ರಿಯೆ ವಿಧಾನಗಳನ್ನು ಆಚರಿಸಿ ಗ್ರಾಮಸ್ಥರು ಹಿಂತಿರುಗಿದ್ದಾರೆ.
Comments are closed.