
ಇಟಾನಗರ: ಆರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಸೇರಿದಂತೆ 43 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಮೈತ್ರಿಯ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ(ಪಿಪಿಎ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಪಿಪಿಎ ಪಕ್ಷದೊಂದಿಗೆ ಕಾಂಗ್ರೆಸ್‌ಅನ್ನು ವಿಲೀನಗೊಳ್ಳಿಸುತ್ತಿರುವುದಾಗಿ ವಿಧಾನಸಭಾ ಸಭಾಪತಿ ವಾಂಗ್ಕಿ ಲೊವಾಂಗ್ ಅವರೊಂದಿಗೆ ಖಂಡು ಮಾತುಕತೆ ನಡೆಸಿದ್ದರು.
60 ಸದಸ್ಯರ ಸಂಖ್ಯಾಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 47 ಶಾಸಕರನ್ನು ಹೊಂದಿದ್ದು, ಬಿಜೆಪಿ 11ಶಾಸಕರನ್ನು ಒಳಗೊಂಡಿದೆ. ಕಾಂಗ್ರೆಸ್ ತೊರೆಯದ ಒಬ್ಬರೇ ಶಾಸಕರೆಂದರೆ ಮಾಜಿ ಮುಖ್ಯ ಮಂತ್ರಿ ನಬಾಮ್ ತೂಕಿ.
ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ತೂಕಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದಿದ್ದಕ್ಕೆ ಅವರನ್ನು ಪದಚ್ಯುತಿಗೊಳಿಸಿ ಖಂಡು ಅವರನ್ನು ರಾಜ್ಯ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಿತ್ತು.
Comments are closed.