ಕರ್ನಾಟಕ

ಎಸಿಬಿ ಬಲೆಗೆ ಬಿದ್ದ ಮೂವರು ಭ್ರಷ್ಟ ಅಧಿಕಾರಿಗಳು

Pinterest LinkedIn Tumblr

acbಬೆಂಗಳೂರು, ಸೆ.7- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಮೂವರು ಭ್ರಷ್ಟ ಅಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಬಿಬಿಎಂಪಿ ಹಿರಿಯ ಆರೋಗ್ಯಾಕಾಧಿರಿಯೊಬ್ಬರನ್ನು ಲಂಚ ಪಡೆಯುವಾಗ ಟ್ರ್ಯಾಪ್ ಮಾಡಿ ಎಸಿಬಿ ಬಲೆಗೆ ಕೆಡವಿರುವುದಲ್ಲದೆ, ಇಬ್ಬರು ಉಪನಿರ್ದೇಶಕರು ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಬಂತ ಅಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೋಲಾರ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿಯವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಇವರು ವಾಸಿಸುವ ಚಿಂತಾಮಣಿ ನಗರದ ಶಿಡ್ಲಘಟ್ಟ ರಸ್ತೆಯ ನಿವಾಸದ ಮೇಲೂ ದಾಳಿ ಮಾಡಿ ಅಕ್ರಮ ಆಸ್ತಿಗೆ ಸಂಬಂಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಂತಾಮಣಿ ತಾಲೂಕಿನ ಶ್ರೀನಿವಾಸರೆಡ್ಡಿ ಎಂಬುವರಿಗೆ ಸೇರಿದ ಪಬ್ಲಿಕ್ ಶಾಲೆ ಮೇಲೂ ದಾಳಿ ನಡೆಸಿದ್ದು, ಅಕ್ರಮ ದಾಖಲೆಗಳ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು ನಗರದ ಭೂ ವಿಜ್ಞಾನ ಉಪನಿರ್ದೇಶಕ ಸಂಪತ್‌ಕೃಷ್ಣ ಅವರ ಆರ್‌ಟಿ ನಗರದ ಕನಕನಗರದಲ್ಲಿರುವ ಮನೆ ಹಾಗೂ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲಿ ಹಲವು ಕಡತಗಳನ್ನು ಎಸಿಬಿ ಅಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದ್ವಿತೀಯ ದರ್ಜೆ ಸಹಾಯಕರಾಗಿರುವ ಬಿ.ಟಿ.ಶ್ರೀನಿವಾಸ್ ಅವರ ಗುಡಿಬಂಡೆಯ ಬಾಪೂಜಿನಗರದಲ್ಲಿರುವ ಮನೆ ಮೇಲೆ ಮತ್ತು ಅವರ ಸಹೋದರರ ಮನೆಯಲ್ಲಿರುವ ದಾಖಲಾತಿ ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಳಿಗೆ ಒಳಗಾಗಿರುವ ಮೂವರು ಅಕಾರಿಗಳು ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯಿದ್ದು, ಮೂವರು ಅಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರು ಎಸ್‌ಪಿಗಳಾದ ಉಮಾ ಪ್ರಶಾಂತ್ ಮತ್ತು ಲಾಬೂರಾಮ್ ನೇತೃತ್ವದಲ್ಲಿ 6 ಡಿವೈಎಸ್‌ಪಿಗಳು 11 ಇನ್ಸ್‌ಪೆಕ್ಟರ್‌ಗಳು ಸೇರಿ 20 ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಐಜಿಪಿ ಎಂ.ಎನ್.ಸಲೀಂ ತಿಳಿಸಿದ್ದಾರೆ.

ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಅಕಾರಿ:

ಬಿಬಿಎಂಪಿ ಹಿರಿಯ ಆರೋಗ್ಯಾಕಾರಿ ಕುಮಾರ್ ಎಂಬುವವರು ಟ್ರೇಡ್ ಲೈಸೆನ್ಸ್ ಕೊಡುವುದಕ್ಕಾಗಿ 6 ಸಾವಿರ ರೂ. ಲಂಚ ಪಡೆಯುವಾಗ ದಾಳಿ ನಡೆಸಿರುವ ಎಸಿಬಿ ಅಕಾರಿಗಳು ಬಲೆಗೆ ಕೆಡವಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಬಂತ ಅಕಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Comments are closed.