ಅಂತರಾಷ್ಟ್ರೀಯ

ಹೊಸದಾಗಿ ಪತ್ತೆಯಾದ ಮೀನಿಗೆ ಬರಾಕ್ ಒಬಾಮ ಹೆಸರು!

Pinterest LinkedIn Tumblr

obama-1ವಾಷಿಂಗ್ ಟನ್ಹವಾಯಿಯನ್ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ಪತ್ತೆಯಾಗಿದ್ದ ಮೀನಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
ಹವಾಯಿ ರಾಷ್ಟ್ರೀಯ ಸ್ಮಾರಕ(ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ) ಪ್ರದೇಶವನ್ನು ವಿಸ್ತರಿಸಿದ ಅಮೆರಿಕ ಅಧ್ಯಕ್ಷರ ಕ್ರಮವನ್ನು ಗೌರವಿಸುವುದಕ್ಕಾಗಿ ವಿಜಾನಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದ ವಿಸ್ತೀರ್ಣವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿಸ್ತರಿಸಿದ ಪರಿಣಾಮ ರಾಷ್ಟ್ರೀಯ ಸ್ಮಾರಕದ ವಿಸ್ತೀರ್ಣತೆ ಮೂಲ ವಿಸ್ತೀರ್ಣತೆಗಿಂತ ನಾಲ್ಕುಪಟ್ಟು ಹೆಚ್ಚಾಗಿದ್ದು 582,578 ಚದರ ಮೀಟರ್ ನಷ್ಟಾಗಿದೆ. ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದಲ್ಲಿ 300 ಅಡಿ ಆಳದಲ್ಲಿ ಮೆರೂನ್ ಹಾಗೂ ಚಿನ್ನದ ಬಣ್ಣದ ಮೀನೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು.
ಹೊಸದಾಗಿ ಪತ್ತೆಯಾಗಿರುವ ಮೀನಿನ ಬಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಚುನಾವಣಾ ಪ್ರಚಾರದ ಲಾಂಛನದ ಬಣ್ಣವನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜಲಚಾರವೊಂದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡುತ್ತಿರುವುದು ಇದೆ ಮೊದಲಲ್ಲ. 2012 ರಲ್ಲಿ ಟೆನ್ನೆಸ್ಸೀ ನದಿಯಲ್ಲಿ ಪತ್ತೆಯಾಗಿದ್ದ ಮೀನಿಗೆ ಎಥಿವ್ ಸ್ತೋವ ಒಬಾಮ ಎಂದು ನಾಮಕರಣ ಮಾಡಲಾಗಿತ್ತು.

Posted by: SBV | Source: Online Desk

Comments are closed.