ಕರ್ನಾಟಕ

ಮರಿಗೌಡ ಅಲ್ಲ ಅವರ ಅಪ್ಪ ಬಂದ್ರೂ ಬಿಡುವುದಿಲ್ಲ: ಸಚಿವ ರಮೇಶ್ ಕುಮಾರ್

Pinterest LinkedIn Tumblr

rameshಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಗೌಡ ಅಲ್ಲ ಅವರ ಅಪ್ಪ ಬಂದರೂ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್‌‌ನಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮರಿಗೌಡ ಅವರ ಹುಡುಕಾಟ ನಡೆದಿದೆ. ಮರಿಗೌಡ ಅಲ್ಲ ಅವರ ಅಪ್ಪ ಬಂದರು ಪ್ರಕರಣವನ್ನು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ರಮೇಶ್ ಕುಮಾರ್ ಅವರ ಸಚಿವರಾದ ಮೇಲೆ ಮೌನವಾಗಿದ್ದಾರೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಚಿವ ರಮೇಶ್ ಕುಮಾರ್, ನಾನು ಬಾಲ ಮುದುರಿಕೊಂಡು ಕೂರುವವನಲ್ಲ ಎಂದು ಹೇಳಿದ್ದಾರೆ.

ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸದಸ್ಯ ಹಾಗೂ ಸಿಎಂ ಆಪ್ತ ಮರಿಗೌಡ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿದ್ದರು.

Comments are closed.