ರಾಷ್ಟ್ರೀಯ

65 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟನ ಬಂಧನ

Pinterest LinkedIn Tumblr

actorನವದೆಹಲಿ: ಬಾಲಿವುಜ್ ನಟ ಜಾನ್ ಅಬ್ರಾಹಂ ಇವರಿಗೆ ಪ್ರೇರಣೆ, ಬೈಕ್ ಸವಾರಿ ಇವರಿಗೆ ಪ್ಯಾಶನ್. ಬಾಲಿವುಡ್ ಚಿತ್ರನಟನಿಂದ ಸ್ಪೂರ್ತಿಗೊಂಡ ಆರೋಪಿಗಳ ತಂಡ ವೇಗವಾಗಿ ಚಲಿಸುವ ಬೈಕ್‌ ಬಾಡಿಗೆಗೆ ಪಡೆದು ಕಳ್ಳತನಕ್ಕೆ ಇಳಿದಿದ್ದರು. ಆರೋಪಿಗಳಲ್ಲಿ ಒಬ್ಬನಿಗೆ ವೇಗವಾಗಿ ಬೈಕ್ ಚಾಲನೆ ಮಾಡುವ ತರಬೇತಿ ನೀಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸರಗಳ್ಳತನ ಸೇರಿದಂತೆ 65 ದರೋಡೆ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ವಿಟಾರಣೆ ನಡೆಸಿದಾಗ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ.

ಅಪರಾಧಿಗಳ ತಂಡ ಸೇರುವ ಮುನ್ನ ಪಿಂಟು ಶರ್ಮಾ ಎನ್ನುವ ಆರೋಪಿ,ರಸ್ತೆ ಬದಿ ನಾಟಕಗಳು ಮತ್ತು ಕ್ರೈಮ್ ಧಾರವಾಹಿಯಾದ ಸಾವಧಾನ್ ಇಂಡಿಯಾದಲ್ಲಿ ನಟನಾಗಿ ಖ್ಯಾತಿ ಪಡೆದಿದ್ದ. ಧಾರವಾಹಿಯಲ್ಲಿ ಜನತೆಗೆ ಕಳ್ಳರಿಂದ ಎಚ್ಚರಿಕೆ ನೀಡುತ್ತಿದ್ದ ಪಿಂಟು ಶರ್ಮಾ ಇದೀಗ ತಾನೇ ಸರಗಳ್ಳನಾಗಿದ್ದ.

ಹಲವು ಧಾರವಾಹಿಗಳಲ್ಲಿ ನಟಿಸಿದ್ದ ಪಿಂಟು ಶರ್ಮಾನನ್ನು ಬಂಧಿಸಿದಾಗ ಆತನ ತಂಡದಲ್ಲಿದ್ದ ಸೋನು ಸಿಂಗ್, ಸಂದೀಪ್ ಸಿಂಗ್ ಮತ್ತು ದೀಪು ಸೇಠ್ ಅವರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ದೆಹಲಿಯ ಆಗ್ನೇಯ ಭಾಗದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ತಂಡವೊಂದನ್ನು ರಚಿಸಿತ್ತು.ಪೊಲೀಸರ ಕಠಿಣ ಪರಿಶ್ರಮದಿಂದಾಗಿ ಆರೋಪಿಗಳ ಗ್ಯಾಂಗ್‌ ಬಲೆಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.