ದುಬೈ: ಸೌದಿ ಅರೆಬಿಯಾದ ಜೆದ್ದಾ ನಗರದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಆತ್ಮಾಹುತಿ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದಾಗಿ ವರದಿಯಾಗಿದೆ.
ಕಾರಿನಲ್ಲಿ ಸಾಗುತ್ತಿದ್ದ ಬಾಂಬ್ ದಾಳಿಕೋರನು ಜೆದ್ದಾದಲ್ಲಿನ ಅಮೆರಿಕ ರಾಯಭಾರಿ ಕಚೇರಿಗೆ ಸಮೀಪದ ಆಸ್ಪತ್ರೆ ಮತ್ತು ಮಸೀದಿಯತ್ತ ಹೋಗುತ್ತಿದ್ದ. ಈ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ದಾಳಿಕೋರ ಮೃತಪಟ್ಟಿದ್ದಾನೆ. ಮಾತ್ರವಲ್ಲದೇ ಇಬ್ಬರು ಭದ್ರತಾ ಅಧಿಕಾರಿಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಈ ಆತ್ಮಾಹುತಿ ಬಾಂಬ್ ದಾಳಿಯ ಬಗ್ಗೆ ತತ್ಕ್ಷಣದ ಪ್ರತಿಕ್ರಿಯೆಗಾಗಿ ಸೌದಿ ಅರೇಬಿಯದಲ್ಲಿನ ಅಮೆರಿಕ ದೂತಾವಾಸದ ಅಧಿಕಾರಿಗಳಾಗಲೀ ಸೌದಿಯ ಒಳಾಡಳಿತ ಸಚಿವಾಲಯದ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ಹಿಂದೆ 2004ರಲ್ಲಿ ಜೆದ್ದಾದಲ್ಲಿನ ಅಮೆರಿಕದ ದೂತಾವಾಸದ ಮೇಲೆ ನಡೆದಿದ್ದ ಅಲ್ ಕಾಯಿದಾ ಉಗ್ರರ ಬಾಂಬ್ ದಾಳಿಯಲ್ಲಿ ಸ್ಥಳೀಯವಾಗಿ ನೇಮಕಗೊಂಡಿದ್ದ ಐವರು ಸಿಬಂದಿಗಳು ಮತ್ತು ನಾಲ್ವರು ಬಂದೂಕುಧಾರಿಗಳು ಹತರಾಗಿದ್ದರು.
Comments are closed.