ಕರ್ನಾಟಕ

ದನ, ಕುರಿ ಕಳ್ಳರೆಂದು ಆರೋಪಿಸಿ ಯುವಕರಿಗೆ ಗೂಸಾ

Pinterest LinkedIn Tumblr

crimeರಾಮನಗರ: ದನ, ಕುರಿ ಕಳ್ಳರು ಎಂದು ಆರೋಪಿಸಿ ಐದು ಮಂದಿ ಯುವಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ತಾಲೂಕಿನ ಕಟುಕಪಾಳ್ಯದಲ್ಲಿ ನಡೆದಿದೆ.

ರಘು, ಅಮೃತ್, ಶ್ರೀಕಾಂತ್, ಕೃಷ್ಣ ಮತ್ತು ವೇದಮೂರ್ತಿ ಹಲ್ಲೆಗೊಳಗಾದ ಯುವಕರು.

ಈ ಐವರು ಯುವಕರು ಸಫಾರಿ ಕಾರು ಕೆಎ-01 ಎಂಸಿ-6333ನಲ್ಲಿ ಬಂದು ಕುಟುಕನ ಪಾಳ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಅಲ್ಲಿನ ಗ್ರಾಮಸ್ಥರು ಊರಿನಲ್ಲಿ ಕಳೆದೊಂದು ತಿಂಗಳಿಂದ ದನ ಮತ್ತು ಕುರಿ ಕಳ್ಳತನವಾಗುತ್ತಿತ್ತು. ರಾತ್ರಿ ಹೊತ್ತಲ್ಲಿ ಬಂದು ದನ, ಕುರಿಯನ್ನು ಕದ್ದೊಯ್ಯಲಾಗುತ್ತಿತ್ತು. ಕಾರಣ ನಾವು ನಾಲ್ಕಾರು ದಿನಗಳಿಂದ ರಾತ್ರಿಯೆಲ್ಲ ಕಾಯುತ್ತಿದೆವು. ಅಂತೆಯೇ ಭಾನುವಾರ ಈ ಯುವಕರು ಕದಿಯಲಿಕ್ಕೆಂದು ಇಲ್ಲಿಗೆ ಬಂದಿದ್ದಾರೆಂದು ತಿಳಿದು ಅವರನ್ನು ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಗೂಸಾ ನೀಡಿರುವುದಾಗಿ ಆರೋಪಿಸಿದ್ದಾರೆ.

ಆದರೆ ಯುವಕರು, ನಾವು ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಾಗಿದ್ದು, ಟ್ರಿಪ್ಗೆ ಹೋಗಿದ್ದೆವು. ತಡರಾತ್ರಿ ನಿದ್ದೆ ಬಂದ ಹಿನ್ನೆಲೆಯಲ್ಲಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಿದ್ದೆ ಮಾಡಿದ್ದೆವು. ಕುರಿ, ದನ ಕದಿಯಲಿಕ್ಕಾಗಿ ಇಲ್ಲಿಗೆ ಬಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಥಳಿತಕ್ಕೊಳಗಾದ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments are closed.