
ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಉಗಾಂಡ ಯುವತಿಯನ್ನು ಕರೆಸಿಕೊಂಡ ನೈಜೀರಿಯಾ ಪ್ರಜೆಗಳು ವೇಶ್ಯಾವಾಟಿಕೆಗೆ ಸಹಕರಿಸಲಿಲ್ಲವೆಂದು ಆಕೆ ಮೇಲೆ ಹಲ್ಲೆ ನಡೆಸಿ ಮೂರನೆ ಮಹಡಿಯಿಂದ ತಳ್ಳಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಫೌಜಿಯಾ (22) ಎಂಬಾಕೆ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸ ಕೊಡಿಸುವ ಆಮಿಷವೊಡ್ಡಿ ಉಗಾಂಡಾದಿಂದ ಈ ಯುವತಿಯನ್ನು ಕರೆಸಿಕೊಂಡ ನೈಜೀರಿಯಾದ ಫರೀದಾ ಮತ್ತು ಶಿರಾಬೆ ಎಂಬುವರು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾರೆ.
ಇದಕ್ಕೆ ಒಪ್ಪದ ಫೌಜಿಯಾ ಮೇಲೆ ಹಲ್ಲೆ ನಡೆಸಿದ ನೈಜೀರಿಯಾ ಪ್ರಜೆಗಳು ಕಟ್ಟಡದ ಮೂರನೆ ಮಹಡಿಯಿಂದ ತಳ್ಳಿದ ಪರಿಣಾಮ ಆಕೆಯ ಕಾಲು ಮುರಿದಿದ್ದು, ಕೊತ್ತನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Comments are closed.