ಕರ್ನಾಟಕ

3 ಬಾಲಕರ ವಿವಸ್ತ್ರಗೊಳಿಸಿ ಮನಬಂದಂತೆ ಥಳಿತ

Pinterest LinkedIn Tumblr

halllllleಬೆಂಗಳೂರು: ಚಿಲ್ಲರೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆಂಬ ಆರೋಪದ ಮೇಲೆ ಮೂವರು ವಿದ್ಯಾರ್ಥಿಗಳನ್ನು 7 ಮಂದಿ ಯುವಕರು ವಿವಸ್ತ್ರಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಹೊಸಕೋಟೆಯಲ್ಲಿ ಜೂನ್‌ 30ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜೂನ್‌ 27ರಂದು ಹೊಸಕೋಟೆಯ ಮಸ್ತಾಕ್‌ ಎಂಬುವರ ಚಿಲ್ಲರೆ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮೂವರು ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮಸ್ತಾಕ್‌ ಅವರ ಪುತ್ರ ನೂರುದ್ದೀನ್‌ ಹಾಗೂ ಆತನ ಸ್ನೇಹಿತರು ಈ ಅಮಾನುಷ ಕೃತ್ಯ ಎಸಗಿದ್ದಾರೆ.

ಮಧ್ಯಾಹ್ನದ ಬಿಡುವಿನ ವೇಳೆ ಶಾಲೆಯಿಂದ ಈ ಮೂವರು ಬಾಲಕರನ್ನು ಕರೆದುಕೊಂಡು ಹೋಗಿರುವ ನೂರುದ್ದೀನ್‌ ಹಾಗೂ ಆತನ ಸ್ನೇಹಿತರು ಪಟ್ಟಣದ ಹೊರವಲಯದ ತೋಪಿನಲ್ಲಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಬಾಲಕರ ಬಟ್ಟೆ ಬಿಚ್ಚಿಸಿ ನೆಲಕ್ಕೆ ಹಾಕಿಕೊಂಡು ತುಳಿದು, ದೊಣ್ಣೆಗಳಿಂದ ಥಳಿಸಿ ತಪ್ಪೊಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾರೆ. ಇದಲ್ಲದೆ ಬಾಲಕರಿಗೆ ಹೊಡೆಯುವ ದೃಶ್ಯವನ್ನು ನೂರುದ್ದೀನ್‌ ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಲ್ಲೆಗೊಳಗಾದ ಬಾಲಕರ ಪೋಷಕರು ಆರೋಪಿಸಿದ್ದಾರೆ.

Comments are closed.