ಢಾಕಾ (ಪಿಟಿಐ): ಢಾಕಾದಲ್ಲಿ ಐಎಸ್ ಉಗ್ರರು ನಡೆಸಿದ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ಬಾಂಗ್ಲಾದೇಶ ಸೇನೆ ಹೇಳಿದೆ.
ಸೇನೆ ಪ್ರತಿ ದಾಳಿ ನಡೆಸುವುದಕ್ಕೂ ಮುನ್ನ ಒತ್ತೆ ಇರಿಸಿಕೊಂಡಿದ್ದ 20 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಹಲವು ಮಂದಿಯ ಕತ್ತು ಕುಯ್ಯಲಾಗಿದೆ ಎಂದು ಬ್ರಿಗೇಡಿಯರ್ ಜನರಲ್ ನಯೀಮ್ ಅಶ್ಫಕ್ ಚೌಧರಿ ಹೇಳಿದ್ದಾರೆ.
ಸೇನೆ 13 ನಿಮಿಷಗಳಲ್ಲಿ ಆರು ಉಗ್ರರನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆಯನ್ನು ಅಂತ್ಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಟಲಿ ಮತ್ತು ಜಪಾನ್ ದೇಶದವರಿದ್ದಾರೆ. ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಢಾಕಾದ ‘ಗುಲ್ಷನ್’ ಪ್ರದೇಶದ ಆರ್ಟಿಸನ್ ಬೇಕರಿ ರೆಸ್ಟೋರೆಂಟ್‌ಗೆ ಶುಕ್ರವಾರ ರಾತ್ರಿ ನುಗ್ಗಿದ್ದ ಉಗ್ರರು, 15ಕ್ಕೂ ಹೆಚ್ಚು ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದರು.
ಭಾರತದ ಯುವತಿ ಸಾವು: ಉಗ್ರರ ದಾಳಿಯಲ್ಲಿ ಭಾರತ ಮೂಲದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
Comments are closed.