ಕರ್ನಾಟಕ

ಕಬಡ್ಡಿ ಕ್ರೀಡೆಗೆ “ಮಾಡ್ರನ್ ಟಚ್ “ನಾಳೆಯಿಂದ ಮಹಿಳೆಯರ ‘ಕಬಡ್ಡಿ ಕಬಡ್ಡಿ’

Pinterest LinkedIn Tumblr

ladiws_kabbadi_photo

ಕಬಡ್ಡಿ ಕ್ರೀಡೆಗೆ ಮಾಡ್ರನ್ ಟಚ್ ಕೊಟ್ಟು ಆರಂಭಿಸಿದ ಪ್ರೋ ಕಬಡ್ಡಿ ಲೀಗ್ ಹಿಟ್ ಆದ ಬೆನ್ನಲೇ ಈ ಬಾರಿ 4ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಯಶಸ್ಸಿನ ಬೆನ್ನುಹತ್ತಿ ಮಹಿಳೆಯರ ಕಬಡ್ಡಿ ಲೀಗ್ ಆರಂಭವಾಗುತ್ತಿದ್ದು, ನಾಳೆಯಿಂದ ಮಹಿಳೆಯರು ‘ಕಬಡ್ಡಿ ಕಬಡ್ಡಿ ‘ ಎಂದು ತೊಡೆ ತಟ್ಟಲಿದ್ದಾರೆ.

ಪ್ರೊ ಕಬಡ್ಡಿ ಲಿಗ್ನ ಆಕರ್ಷಣೆ, ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈ ಹಿನ್ನಲೆಯಲ್ಲಿ ಮಹಿಳಾ ಕಬಡ್ಡಿ ಆರಂಭವಾಗಲಿದ್ದು, ಮಹಿಳೆಯರನ್ನು ಕಬಡ್ಡಿಯತ್ತ ಸೆಳೆಯಲು ಮಹಿಳಾ ಪ್ರೊ ಕಬಡ್ಡಿ ಯನ್ನು ಹುಟ್ಟಿಹಾಕಲಾಗಿದೆ.

ಮಹಿಳಾ ಕಬಡ್ಡಿಯಲ್ಲಿ 3 ತಂಡಗಳು : 

ಸದ್ಯ ಪುರುಷರ ಪ್ರೊ ಕಬಡ್ಡಿ ಲೀಗ್ ಯಶಸ್ವಿಯಾಗಿ ಮೂರು ಆವೃತ್ತಿಯನ್ನು ಪೂರ್ಣಗೊಳಿಸಿದ್ದು, ಈ ಹಿನ್ನಲೆಯಲ್ಲಿ ಮಹಿಳೆಯರು ಕೂಡ ಇದಕ್ಕಾಗಿ ತೊಡೆ ತಟ್ಟಲು ಸಖತ್ ತಾಲೀಮು ನಡೆಸಿದ್ದಾರೆ. ವುಮೆನ್ಸ್ ಕಬಡ್ಡಿ ಚಾಲೆಂಜ್ನಲ್ಲಿ ಒಟ್ಟು 3 ಮಹಿಳಾ ತಂಡಗಳು ಭಾಗವಹಿಸಲಿವೆ. ದೇಶದ ಪ್ರಮುಖ ಮಹಿಳಾ ಆಟಗಾರ್ತಿಯರು ಈ ಚಾಲೆಂಜ್ನಲ್ಲಿ ಭಾಗವಹಿಸಲಿದ್ದು. ಪುರುಷರು ಆಡುವ ಅಂಗಳದಲ್ಲೇ ಮಹಿಳೆಯರು ಸೆಣಲಿದ್ದಾರೆ.

ಫೈರ್ ಬರ್ಡ್ಸ್, ಐಸ್ ಡಿವಾಸ್ ಮತ್ತು ಸ್ಟೊರ್ಮ್ ಕ್ವೀನ್ಸ್ ಎಂದು ತಂಡಗಳಿಗೆ ಹೆಸರಿಡಲಾಗಿದ್ದು, 6 ವಿವಿಧ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಒಟ್ಟು ಆರು ಲೀಗ್ ಪಂದ್ಯಗಳು ನಡೆಯಲಿವೆ. ಒಂದು ಎಲ್ಮಿನೇಟರ್, ಜುಲೈ 31 ರಂದು ಫೈನಲ್ ಪಂದ್ಯ ನಡೆಯಲಿದೆ.

ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿಯರ ಸಾರಥ್ಯ:
ಮಹಿಳಾ ಕಬಡ್ಡಿ ಚಾಲೆಂಜ್ನಲ್ಲಿ ಭಾಗವಹಿಸುತ್ತಿರುವ 3 ತಂಡಗಳ ಪೈಕಿ ಎರಡು ತಂಡಗಳ ಸಾರಥ್ಯ ಕನ್ನಡತಿಯರ ಪಾಲಾಗಿದೆ. ಮಮತಾ ಪೂಜಾರಿ ಫೈರ್ ಬರ್ಡ್ಸ್ ತಂಡದ ನಾಯಕಿಯಾಗಿದ್ದಾರೆ. ಸ್ಟೊರ್ಮ್ ಕ್ವೀನ್ಸ್ ತಂಡಕ್ಕೆ ತೇಜಸ್ವಿನಿ ಭಾಯಿ ನಾಯಕಿಯಾಗಿದ್ದಾರೆ. ಈ ಇಬ್ಬರು ಭಾರತ ಮಹಿಳಾ ತಂಡವನ್ನು ಯಶಸ್ವಿಯಾಗಿ ಮುನ್ನೆಡಿಸಿದ ಅನುಭವ ಹೊಂದಿದ್ದಾರೆ.

ಐಸ್ ಡಿವಾಸ್ ತಂಡಕ್ಕೆ ಅಭಿಲಾಷ ಮಾತ್ರೆ ನಾಯಕಿಯಾಗಿದ್ದಾರೆ. ಮೂವರು ನಾಯಕಿಯರು ಮೈದಾನದಲ್ಲಿ ಮಹಿಳಾ ಪವರ್ ತೋರಿಸುವ ತವಕದಲ್ಲಿದ್ದಾರೆ. ನಾಳೆ ನಡೆಯುವ ಉದ್ಘಾಟನ ಪದ್ಯದಲ್ಲಿ ಫೈರ್ ಬರ್ಡ್ಸ್ VS ಐಸ್ ಡಿವಾಸ್ ತಂಡಗಳು ಎದುರಾಗಲಿವೆ.

Comments are closed.