ಕರ್ನಾಟಕ

ಅವರ್’ಮೈನ್ ತಂಡದಿಂದ ಸುಂದರ್ ಪಿಚೈಯವರ ಕೋರಾ ಖಾತೆ ಹ್ಯಾಕ್

Pinterest LinkedIn Tumblr

google_ceo_sundarpille

ಗೂಗಲ್ ಸಿಇಓ ಸುಂದರ್ ಪಿಚೈ ಕೋರಾ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಇತ್ತೀಚೆಗೆ ಫೇಸ್’ಬುಕ್ ಸಿಇಓ ಮಾರ್ಕ್ ಝುಕರ್’ಬರ್ಗ್ ಅವರ ಟ್ವಿಟರ್ ಹಾಗೂ ಪಿಂಟರೆಸ್ಟ್ ಖಾತೆಯನ್ನು ಹ್ಯಾಕ್ ಮಾಡಿದವರೇ ಈ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೂರು ಸದಸ್ಯರನ್ನೊಳಗೊಂಡ ಅವರ್’ಮೈನ್ ತಂಡವು ಪಿಚೈಯವರ ಕೋರಾ ಖಾತೆಯಲ್ಲಿ ಹಲವು ಸಂದೇಶಗಳನ್ನು ಪೋಸ್ಟ್ ಮಾಡಿದೆ. ಪಿಚೈ ಕೋರಾ ಖಾತೆಯು ಟ್ವಿಟರ್ ಖಾತೆಯೊಂದಿಗೆ ಜೋಡಿಸಲ್ಪಟ್ಟಿರುವುದರಿಂದ ಅವರ ಎಲ್ಲಾ 5,08,000 ಫಾಲೋವರ್ಸ್’ಗಳಿಗೆ ಹ್ಯಾಕ್ ಆಗಿರುವ ಬಗ್ಗೆ ಸಂದೇಶ ಹೋಗಿದೆ.

ಆ ಟ್ವೀಟ್ಸ್’ಗಳನ್ನು ಈಗ ಅಳಿಸಿ ಹಾಕಲಾಗಿದೆ. ಅವರ್’ಮೈನ್ ತನ್ನನ್ನು ಒಂದು ಸಾಫ್ಟ್’ವೇರ್ ಭದ್ರತೆಯ ಕಂಪನಿಯೆಂದು ಪರಿಚಯಿಸಿದೆ. “ಹೇ, ನಾವು ಅವರ್’ಮೈನ್, ನಿಮ್ಮ ಭದ್ರತೆ ಹೇಗಿದೆ ಎಂಬುವುದನ್ನು ನಾವು ಪರೀಕ್ಷಿಸುತ್ತಿದ್ದೇವೆ. ಅವರ್’ಮೈನ್’ಗೆ ಭೇಟಿ ನೀಡಿ, ನಿಮ್ಮ ಭದ್ರತೆಯನ್ನು ಮೇಲ್ದರ್ಜೆಗೇರಿಸಿಕೊಳ್ಳಿ,” ಎಂದು ಆ ತಂಡ ಹೇಳಿದೆ.

Comments are closed.