ಕರ್ನಾಟಕ

ಖರ್ಗೆ ಕಂಡರೆ ಅಂಜುಬುರುಕ ಸಿದ್ದರಾಮಯ್ಯ ಗಢಗಢ : ಮಾಲಕರೆಡ್ಡಿ ಆಕ್ರೋಶ

Pinterest LinkedIn Tumblr

kargeಯಾದಗಿ: ಸಿಎಂ ಸಿದ್ದರಾಮಯ್ಯ ಅಂಜುಬುರುಕ ,ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಗಢ ಗಢ ನಡುತ್ತಾರೆ ಎಂದು ಸಚಿವ ಸ್ಥಾನ ವಂಚಿತ ಯಾದಗಿರಿ ಹಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಲಕರೆಡ್ಡಿ ಅವರು ಖರ್ಗೆ ಮತ್ತು ಸಿದ್ದರಾಮಯ್ಯ ವಿರುದ್ದ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದರು.

1971 ರಲ್ಲಿ ಖರ್ಗೆ ಅವರನ್ನು ರಾಜಕೀಯಕ್ಕೆ ಕರೆತಂದವರು ನಾವು ,ಧರಂ ಸಿಂಗ್‌ ಧರ್ಮರಾವ್‌ ಸೇರಿ ವೇದಿಕೆ ಕಲ್ಪಿಸಿಕೊಟ್ಟಿದ್ದೇವು .ಆದರೆ ಖರ್ಗೆ ಕಳೆದ ಚುನಾವಣೆಯಲ್ಲಿ ನನಗೆ ಟಿಕೇಟ್‌ ತಪ್ಪಿಸಲು ಯತ್ನಿಸಿದ್ದರು. ಅವರಿಗೆ ಈಗ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ ,ಅವರ ಮಕ್ಕಳು ಶಾಸಕ,ಸಚಿವರಾದರೆ ಸಾಕು ಎಂದರು.

ಅವರು ಕರೋಡ್‌ಪತಿಗಳಾಗಿ ಮುಂದಿವರಿದು ನಾವು ಗುಲಾಮರಾಗಿ ಬದುಕಬೇಕೆಂಬುದು ಅವರ ಆಸೆ ಎಂದು ಖರ್ಗೆ ವಿರುದ್ದ ಕಿಡಿ ಕಾರಿದರು.

ಅಧಿಕಾರಕ್ಕಾಗಿ ನಾನು ಯಾರ ಮನೆ ಬಾಗಿಲಿಗೆ ಹೊದವನಲ್ಲ ಎಂದು ಮಾಲಕರೆಡ್ಡಿ ಹೇಳಿದರು.
-ಉದಯವಾಣಿ,

Comments are closed.