ಬೆಂಗಳೂರು: ಜನಪ್ರಿಯ ನಟ-ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ “ವೇಳೆಯಿಲ್ಲ ಪಟ್ಟಹಾರಿ’ಹಾಗೂ “ಸೈರಾಟ್’ ಚಿತ್ರಗಳ ರೀಮೇಕ್‌ಗಳಲ್ಲಿ ರವಿಚಂದ್ರನ್ ಅವರ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ನಟಿಸುತ್ತಿದ್ದಾರೆ.
ಈ ಚಿತ್ರಗಳು ಸದ್ಯದಲ್ಲೇ ಶುರುವಾಗುವಸಾಧ್ಯತೆ ಇವೆ. ರವಿಚಂದ್ರನ್ ಅವರ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ಅವರಿಗೆ ಅಭಿನಯಹೊಸದೇನಲ್ಲ. ಈಗಾಗಲೇ ಮನೋರಂಜನ್, “ಸಾಹೇಬ’ಚಿತ್ರದ ಮೂಲಕ ಹೀರೋ ಆಗಿದ್ದಾಗಿದೆ. ಇನ್ನು ಅವರ ಎರಡನೆಯ ಮಗ ವಿಕ್ರಮ್ “ಕ್ರೇಜಿ ಸ್ಟಾರ್’ ಚಿತ್ರದಲ್ಲಿಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಅವರಿಬ್ಬರೂ ರಾಕ್‌ಲೈನ್ ವೆಂಕಟೇಶ್ ಅವರನಿರ್ಮಾಣದ ಎರಡು ಚಿತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. ಈ ಪೈಕಿ “ವೇಳೆಯಿಲ್ಲ ಪಟ್ಟಹಾರಿ’ ಚಿತ್ರದ ರೀಮೇಕ್‌ನಲ್ಲಿ ಮನೋರಂಜನ್ ನಟಿಸಿದರೆ, ಮರಾಠಿ ಚಿತ್ರರಂಗದಲ್ಲಿ 100ಕೋಟಿ ಕಲೆಕ್ಷನ್ ದಾಟಿ ಇತಿಹಾಸ ನಿರ್ಮಿಸಿದ “ಸೈರಾಟ್’ನ ಕನ್ನಡ ರೀಮೇಕ್‌ನಲ್ಲಿ ವಿಕ್ರಮ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
-ಉದಯವಾಣಿ
Comments are closed.