
ಬೀದರ್: ಬಾಲಿವುಡ್ ನಟಿ ಬಿಪಾಷಾ ಬಸು ಅವರನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕರೆತರಲು ರಾಜ್ಯ ಸರ್ಕಾರ ಒಂದೂವರೆ ಕೋಟಿ ರೂ. ನೀಡಿದ್ದು ತಪ್ಪು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬುಧುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ 1.5 ಕೋಟಿ ರೂ. ನೀಡಿ ಬಿಪಾಷಾ ಬಸು ಅವರನ್ನು ಕರೆತಂದು, ಯೋಗಕ್ಕಿರುವ ಪಾವಿತ್ರ್ಯವನ್ನು ರಾಜ್ಯ ಸರ್ಕಾರ ಹಾಳು ಮಾಡಿದೆ. ಆಕೆ ಸಂಸ್ಕಾರಯುತ ಮಹಿಳೆ ಯಲ್ಲ, ಜನರನ್ನು ಸೇರಿಸಲು ಬಿಪಾಷಾ ಅವರನ್ನು ಕರೆಸಿದ್ದಾಗಿ ಸರ್ಕಾರ ಹೇಳುತ್ತಿದೆ. ಜನರನ್ನು ಹೆಚ್ಚಿಗೆ ಸೇರಿಸಲು ಸನ್ನಿ ಲಿಯೋನ್‌ರನ್ನೇ ಕರೆಸಬಹುದಿತ್ತಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರಕಾರ ಕೂಡ ನನಗೆ 8 ಜಿಲ್ಲೆಗಳಲ್ಲಿ ಪ್ರವೇಶಕ್ಕೆ ಬ್ರೇಕ್ ಹಾಕಿದೆ. ಹಾಗಂತ ನನ್ನ ಹೋರಾಟ ನಿಲ್ಲದು. ಶ್ರೀರಾಮ ಸೇನೆಯ ಕಾರ್ಯಗಳು ಎಲ್ಲೆಡೆ ನಡೆಯುತ್ತಿವೆ. ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ಎಷ್ಟೇ ಅಡೆ, ತಡೆಗಳು ಬಂದರೂ ನನ್ನ ಕೆಲಸ ನಿಲ್ಲಲ್ಲ. ಬೇಕಿದ್ದರೆ ಪಾಕಿಸ್ತಾನದಲ್ಲೂ ಹಿಂದೂ ಸಂಘಟನೆ ಕಟ್ಟುವೆ. ನಮ್ಮ ಶಕ್ತಿ ಇನ್ನೂ ಕುಂದಿಲ್ಲ ಎಂದು ತಿಳಿಸಿದರು.
Comments are closed.