ಕರ್ನಾಟಕ

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅಂಬರೀಷ್ ರಾಜೀನಾಮೆ ಕುರಿತು ಹೇಳಿದ್ದು ಹೀಗೆ ….

Pinterest LinkedIn Tumblr

ambi

ಬೆಂಗಳೂರು: ಸಚಿವ ಸ್ಥಾನಕ್ಕೆ ಅಸಮರ್ಥ ಎಂದ ಮೇಲೆ ಶಾಸಕನಾಗಿ ನಾನು ಮಾಡಬೇಕಿರುವುದು ಏನೂ ಇಲ್ಲ ಅಲ್ವಾ ಎಂದು ಮಾಜಿ ಸಚಿವ ಅಂಬರೀಷ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ತಮ್ಮ ಜೆಪಿ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಂಬರೀಷ್, ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದರೇ ನಾನೇ ರಾಜೀನಾಮೆ ನೀಡುತ್ತಿದ್ದೆ. ಸಿದ್ದರಾಮಯ್ಯ ಅವರಿಗೆ ಸ್ವಲ್ಪವೂ ಡಿಗ್ನಿಟಿ ಇಲ್ಲ, ನಾನು ಕೇಂದ್ರ ಮಂತ್ರಿಯಾಗಿದ್ದವನು ಮೂರು ಬಾರಿ ಸಂಸದನಾಗಿದ್ದವನು, ನಮ್ಮನ್ನು ಸೌಜನ್ಯಕ್ಕಾದರೂ ಒಂದು ಮಾತು ಕೇಳಿಲ್ಲ, ಸಿಎಂ ಮನೆಗೆ ಕಳೆದ 3 ವರ್ಷಗಳಲ್ಲಿ ನಾನು 5 ಬಾರಿ ಭೇಟಿ ನೀಡಿರಬಹುದು ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕೂಡ ಸಿಎಂ ಅಭ್ಯರ್ಥಿಯಾಗಿದ್ದಾರೆ, ಅಂಥವರನ್ನೇ ಸಂಪುಟದಿಂದ ಕೈ ಬಿಟ್ಟ ಮೇಲೆ ನಾವೆಲ್ಲಾ ಯಾವ ಲೆಕ್ಕ ಎಂದು ಪ್ರಶ್ನಿಸಿದ ಅಂಬರೀಷ್ ಶ್ರೀನಿವಾಸ್ ಪ್ರಸಾದ್ ಅಂತ ಸರಳ , ಸಜ್ಜನ, ಪ್ರಾಮಾಣಿಕ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ.

ಸ್ವಾಭಿಮಾನಕ್ಕೆ ಧಕ್ಕೆಯಾದರೇ ನಾನು ಸಹಿಸುವುದಿಲ್ಲ, 1981 ರಿಂದ ನಾನು ಇಂಪೋರ್ಟೆಡ್ ಕಾರಿನಲ್ಲಿ ಓಡಾಡುತ್ತಿದ್ದ, ಇನ್ನು ಮುಂದೆಯೂ ಹಾಗೆಯೇ ಇರುತ್ತೇನೆ, ನಾನು ಯಾವತ್ತೂ ಯಾವುದೇ ಅಧಿಕಾರಕ್ಕಾಗಿ ಲಾಬಿ ಮಾಡಿದವನಲ್ಲ, ಅದರ ಅವಶ್ಯಕತೆಯೂ ನನಗೆ ಇಲ್ಲ, ಸಿಎ ಸ್ವಲ್ಪವಾದರೂ ಗೌರವಯುತವಾಗಿ ನಮ್ಮನ್ನು ನಡೆಸಿಕೊಳ್ಳಬೇಕಿತ್ತು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನಿಮ್ಮನ್ನು ಸಂಪುಟದಿಂದ ಕೈ ಬಿಡಲು ರಮ್ಯಾ ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿದ ಅಂಬರೀಷ್ ಆ ಹೆಣ್ಣನು ಮಗಳಿಗೂ ಇದಕ್ಕೂ ಸಂಬಂಧವಿಲ್ಲ, ಅವರನ್ನು ಈ ಪ್ರಕರಣದಲ್ಲಿ ತರಬೇಡಿ, ಯಾರೇ ಕಾರಣ ಆದರೂ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸಿಎಂ ಸಿದ್ದರಾಮಯ್ಯ ಅವರಿಗೆ ಇರುವುದು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನಾನು ಆರೋಗ್ಯವಾಗಿದ್ದೇನೆ, 46 ವರ್ಷಗಳಲ್ಲಿ ನಾನು ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆ ಹಿನ್ನೆಲೆಯಲ್ಲಿ ಚಿತ್ರರಂಗದವರು ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅಂಬರೀಷ್ ಹೇಳಿದರು.

ನಾನೇ ಖುದ್ದು ಹೋಗಿ ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸಿ ಬರುತ್ತೇನೆ ಎಂದು, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಖಡಾಖಂಡಿತವಾಗಿ ಅಂಬರೀಷ್ ಹೇಳಿದ್ದಾರೆ.

Comments are closed.