ರಾಷ್ಟ್ರೀಯ

2ನೇ ಅಂತರರಾಷ್ಟ್ರೀಯ ಯೋಗ ದಿನಕ್ಕೆ ನರೇಂದ್ರ ಮೋದಿ ಚಾಲನೆ; ಚಂಡೀಘಡದಲ್ಲಿ ದಾಖಲೆ ಪ್ರಮಾಣದ ಜನರಿಂದ ಏಕಕಾಲದಲ್ಲಿ ಯೋಗಾಭ್ಯಾಸ

Pinterest LinkedIn Tumblr

Indian Prime Minister Narendra Modi (C) participates in a mass yoga session along with other Indian yoga practitioners to mark the 2nd International Yoga Day at Captol complex in Chandigarh on June 21, 2016.  / AFP PHOTO / PRAKASH SINGH

ಚಂಡೀಗಡ (ಪಿಟಿಐ): ಚಂಡೀಗಡದ ಕ್ಯಾಪಿಟಲ್ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಿದ್ದ 2ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಮೋದಿ ಅವರೊಟ್ಟಿಗೆ ಯೋಧರು, ಮಕ್ಕಳು ಸೇರಿದಂತೆ ಸುಮಾರು 30 ಸಾವಿರ ಮಂದಿ ಸಾಮೂಹಿಕವಾಗಿ ಯೋಗ ಮಾಡಿದರು. ಮೋದಿ ಅವರು ಅರ್ಧಚಕ್ರಾಸನ, ತ್ರಿಕೋನಾಸನ, ವಕ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದರು.

mo1

mo

ನಂತರ ಮಾತನಾಡಿದ ಮೋದಿ, ‘ಇಡೀ ವಿಶ್ವ ಇಂದು ಯೋಗ ಮಾಡುತ್ತಿದೆ. ಯೋಗಕ್ಕೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಸಾಮಾನ್ಯರು ಸಹ ಯೋಗ ಮಾಡಬಹುದು’ ಎಂದರು.

‘ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಅಂತರರಾಷ್ಟ್ರೀಯ ಯೋಗ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ನೀಡಲಾಗುವುದು’ ಎಂದು ಮೋದಿ ಹೇಳಿದರು.

Comments are closed.