ರಾಯಚೂರು: ನಾದಿನಿ ಬೇಕೆ ಎಂದು ಪ್ರೀತಿಸಿ ಮದುವೆಯಾದ ಗೃಹಿಣಿಗೆ ಸ್ವತಃ ಪತಿಯೇ ಆ್ಯಸಿಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಕೃಷ್ಣದೇವರಾಯ ಕಾಲೋನಿಯ ನಿವಾಸಿ ಅನಿತಾ ಪತಿಯಿಂದ ತೀವ್ರ ಹಲ್ಲೆಗೊಳಗಾಗಿರುವ ಗೃಹಿಣಿ.
ನನಗೆ ನೀನು ಬೇಡ ನಿನ್ನ ತಂಗಿಬೇಕು, ಅವಳನ್ನು ಕರೆದುಕೊಂಡು ಬಾ ಇಬ್ಬರನ್ನೂ ಸಾಕುತ್ತೇನೆ ಅಂತ ಚಿತ್ರಹಿಂಸೆ ನೀಡಿದ್ದಾನೆ. ಮೊಬೈಲ್ ಚಾರ್ಜರ್ ವೈಯರ್ ನಿಂದ ಮನಬಂದಂತೆ ಥಳಿಸಿದ್ದಾನೆ. ಬೆತ್ತದಿಂದಲೂ ಹೊಡೆದು ಗಾಯಗೊಳಿಸಿದ್ದಾನೆ.
6 ವರ್ಷಗಳ ಹಿಂದೆ ಮನೆಯವರನ್ನೆಲ್ಲಾ ಎದುರು ಹಾಕಿಕೊಂಡು ಮದುವೆಯಾದ ದಂಪತಿಗೆ 5 ವರ್ಷದ ಮಗುವಿದೆ. ಆದರೆ ಈಗ ರಾಘವೇಂದ್ರ ಹೆಂಡತಿಯ ತಂಗಿಯ ಮೇಲೆ ಕಣ್ಣು ಹಾಕಿದ್ದಾನೆ. ಅಲ್ಲದೆ ಹೆಂಡತಿಯ ಹೆಸರಲ್ಲಿ ಮೈತುಂಬ ಸಾಲಮಾಡಿಕೊಂಡಿದ್ದು ಹಣಕ್ಕಾಗಿ ಪೀಡಿಸಿದ್ದಾನೆ.
ಪತಿಯ ಚಿತ್ರಹಿಂಸೆ ತಾಳಲಾರದೇ ಪತ್ನಿ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿದ್ದೇ ತಡ ಪತಿ ರಾಘವೇಂದ್ರ ಪರಾರಿಯಾಗಿದ್ದಾನೆ. ಇತ್ತ ನಡೆದಾಡಲು ಕಷ್ಟಪಡುವ ಸ್ಥಿತಿಯಲ್ಲಿರುವ ಅನಿತಾ ಚಿಕಿತ್ಸೆ ಪಡೆಯುತ್ತಿದ್ದಾಳೆ.
Comments are closed.