ತಮಿಳುನಾಡು: ಇಲ್ಲಿನ ಹೊಸೂರು ಬಳಿ ಸರಗಳ್ಳರು ಪೊಲೀಸರ ಮೇಲೆ ದಾಳಿ ಮಾಡಿದ ಪರಿಣಾಮ ಓರ್ವ ಪೇದೆ ದಾಳಿಯಲ್ಲಿ ಸಾವನ್ನಪ್ಪಿದ್ದು, ಎಸ್‌ಐ ಮತ್ತು ಇನ್ನೋರ್ವ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸೂರು ರೈಲ್ವೇ ನಿಲ್ದಾಣದ ಬಳಿ ಉದನಪಳ್ಳಿ ಎಂಬಲ್ಲಿ ಸರಗಳ್ಳರನ್ನು ನಾಲ್ವರು ಪೊಲೀಸರು ಬೆನ್ನಟ್ಟಿದ್ದಾಗ ಕಳ್ಳರ ತಂಡ ಪ್ರತಿದಾಳಿ ನಡೆಸಿದ್ದು ,ಈ ವೇಳೆ ಪೇದೆ ಮುನಿಸ್ವಾಮಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದು, ಎಸ್‌ಐ ನಾಗರಾಜು ಮತ್ತು ಪೇದೆ ಧನ್ ಪಾಲ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿ ವೇಳೆ ಓರ್ವ ಸರಗಳ್ಳ (ಬಜ್ಜಿ) ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹಿರಿಯ ಪೊಲೀಸರು ದೌಡಾಯಿಸಿದ್ದು ಸರಗಳ್ಳರ ಬಂಧನಕ್ಕಾಗಿ ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ.
Comments are closed.