ಮನೋರಂಜನೆ

ರಿಲೀಸ್ ಗೆ ಮೊದಲೇ ಚಿತ್ರ ಲೀಕ್; ನಿರ್ಮಾಪಕ ದೂರು

Pinterest LinkedIn Tumblr

uddaa-punjab-release-e1465380168350ಮುಂಬೈ: ಬಾಲಿವುಡ್ ನ ಬಹು ವಿವಾದಿತ ‘ಉಡ್ತಾ ಪಂಜಾಬ್’ ಸಿನಿಮಾ ಬಿಡುಗಡೆಗೂ ಎರಡೂ ದಿನಕ್ಕೂ ಮುನ್ನವೇ ಆನ್‌ಲೈನ್ ನಲ್ಲಿ ಲೀಕಾಗಿದ್ದು, ಚಿತ್ರದ ನಿರ್ಮಾಪಕ ಸೈಬರ್ ಪೊಲೀಸರಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.

ಉಡ್ತಾ ಪಂಜಾಬ್ ನ್ನು ಸೆನ್ಸಾರ್ ಮಂಡಳಿ ಸೆನ್ಸಾರ್ ಮಾಡುತ್ತಿದ್ದು, ಚಿತ್ರವು ಟೊರೆಂಟ್ ಸೈಟ್ ಗಳಲ್ಲಿ ಲಭ್ಯವಿದ್ದು, ಕೆಲವರು ಚಿತ್ರವನ್ನು ಅಕ್ರಮವಾಗಿ ಡೌನ್ ಲೋಡ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಚಿತ್ರ ಲೀಕ್ ಆದ ವಿಚಾರ ತಿಳಿಯುತ್ತಿದ್ದಂತೆ ಚಿತ್ರದ ತಂಡ ಆಘಾತಗೊಂಡು ಕೂಡಲೇ ಡೌನ್ ಲೋಡ್ ಲಿಂಕ್ ನ್ನು ತೆಗೆದುಹಾಕಿದ್ದಾರೆ.

ಚಿತ್ರ ಲೀಕ್ ಆಗಿ ಆನ್ ಲೈನ್ ಸರಿ ಸುಮಾರು 2 ಗಂಟೆ 20 ನಿಮಿಷಗಳ ಕಾಲ ಓಡಾಡಿದೆ. ಇನ್ನು ಚಿತ್ರ ಲೀಕ್ ಆಗಿರುವ ಕುರಿತಂತೆ ವಿಚಾರಿಸಿದಾಗ ಈ ಬಗ್ಗೆ ಮಾತನಾಡಲು ಚಿತ್ರ ತಂಡ ಹಾಗೂ ನಿರ್ದೇಶಕರು ನಿರಾಕರಿಸಿದ್ದಾರೆ.

ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರದ 89 ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ 89 ಕಟ್ ಗಳ ವಿರುದ್ಧ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೂ.13ರಂದು ಅಂತಿಮ ತೀರ್ಪು ಪ್ರಕಟಿಸಿತ್ತು.

Comments are closed.