ಕರ್ನಾಟಕ

ಜಿ.ಪಂ ಸದಸ್ಯನ ಕೊಲೆ ಕೇಸ್ ಗೆ ಹೊಸ ಟ್ವಿಸ್ಟ್

Pinterest LinkedIn Tumblr

jpಹುಬ್ಬಳ್ಳಿ-ಧಾರವಾಡ: ಬಿಜೆಪಿ ಮುಖಂಡ ಹಾಗೂ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಯೋಗೀಶ ಗೌಡ ಕೊಲೆಗೂ ಮುನ್ನ ಆತನಿಗೆ ಅನಾಮಧೇಯ ವ್ಯಕ್ತಿಯೊಬ್ಬ ಎಚ್ಚರಿಕೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.

ಪತ್ರ ಹೀಗಿತ್ತು:

ನಮಸ್ಕಾರ ಯೋಗೇಶ ಗೌಡರೇ

ನಿಮ್ಮ ಅಣ್ಣ ಉದಯಗೌಡ ಅವರ ಕೊಲೆ ಮಾಡಿಸಿದ ಪ್ರಭಾವಿಗಳಾಗಿದ್ದಾರೆ. ನಿಮ್ಮನ್ನು ಸಮಯ ನೋಡಿ ಕೊಲೆ ಮಾಡಬೇಕೆಂದು ಕೆಲ ದಿನಗಳಿಂದ ಕಾಯುತ್ತಿದ್ದಾರೆ. ನಾನು ಯಾರು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಡಿ. ಮುಂದೆ ನಿಮಗೆ ಎಲ್ಲಾ ರೀತಿಯ ಮಾಹಿತಿಯನ್ನು ಪತ್ರದ ಮೂಲಕ ತಿಳಿಸುತ್ತೇನೆ. ನಿಮ್ಮ ಸಹಾಯ ನನಗೆ ಬೇಕಾಗುತ್ತದೆ. ಆಗ ನಾನೇ ನಿಮ್ಮ ಹತ್ತಿರ ಬರುತ್ತೇನೆ. ಧನ್ಯವಾದಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರವು ಯೋಗೀಶ್ ಗೌಡ ಅವರ ಹತ್ಯೆಯ ಮೊದಲ ದಿನವೇ ಪತ್ರ ಮನೆಗೆ ಬಂದಿತ್ತು. ಹಾಳೆಯ ತ್ರಿಕೋನ ಆಕಾರದಲ್ಲಿ ಪತ್ರವನ್ನು ಬರೆದು ಕೊಟ್ಟು ಹೋಗಲಾಗಿದೆ. ಆದರೆ ಈ ಪತ್ರವನ್ನು ಬರೆದವರ್ಯಾರು? ಇವರಿಗೆ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದಾರೆ ಎಂಬ ಸುಳಿವು ಕೊಟ್ಟವರು ಯಾರು? ಈ ಅನಾಮಧೇಯ ವ್ಯಕ್ತಿ ಯಾರು ಎಂಬ ಅನುಮಾನ ಸ್ಥಳೀಯರಲ್ಲಿ ಹಾಗೂ ಪೊಲೀಸರಲ್ಲಿ ಕಾಡುತ್ತಿದೆ. ಮಾತ್ರವಲ್ಲದೇ ಈ ಮಧ್ಯೆ ಪತ್ರದಲ್ಲಿ ಇಬ್ಬರು ರಾಜಕಾರಣಿಗಳ ಹೆಸರನ್ನು ಬರೆಯಲಾಗಿದೆ. ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇದೀಗ ಈ ಪತ್ರ ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದು, ಪತ್ರವನ್ನು ಯೋಗೇಶ ಗೌಡ ಸಂಬಂಧಿಗಳು ಉಪನಗರ ಪೊಲೀಸರಿಗೆ ರವಾನಿಸಿದ್ದಾರೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.

Comments are closed.