ಕರ್ನಾಟಕ

ಬೈಕ್ ಕಳ್ಳನ ಬಂಧನ; 6 ಬೈಕ್ ವಶ

Pinterest LinkedIn Tumblr

baik kalla

ಚನ್ನರಾಯಪಟ್ಟಣ: ಅಂತರ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ ಸುಮಾರು 4.50 ಲಕ್ಷ ರೂ. ಮೌಲ್ಯದ ವಿವಿಧ ಸಂಸ್ಥಗೆ ಸೇರಿದ 6 ಬೈಕಗಳನ್ನು ಗ್ರಾಮಾಂತರ ಠಾಣೆಯ ಎಎಸ್ಐ ಗಿರಿಧರ್ ವಶಪಡಿಸಿ ಕೊಂಡಿದ್ದಾರೆ ಎಂದು ಎಎಸ್ಪಿ ಡೆಕ್ಕಾ ಕಿಶೋರ್ ಬಾಬು ಬುಧವಾರತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಪಿ ಡೆಕ್ಕಾ ಕಿಶೋರ್ ಬಾಬು, ತಾಲೂಕಿನ ಬರಗೂರು ಹ್ಯಾಂಡ್ಪೋಸ್ಟ್ ಬಳಿ ಎಎಸ್ಐ ಗಿರಿಧರ್ ತಮ್ಮ ಸಿಬ್ಬಂದಿ ಜೊತೆ ಜು.12 ರಂದು ಕರ್ತವ್ಯ ನಿರ್ವಹಿಸುವಾಗ ಹಾಸನ ಕಡೆಯಿಂದ ನೋಂದಣೆಯಾಗದ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಬಳಿ ದ್ವಿಚಕ್ರ ವಾಹನದ ದಾಖಲಾತಿ ಇಲ್ಲದೆ ಇರುವುದರಿಂದ ಆತ ಬೈಕ್ ಕಳ್ಳತನ ಮಾಡಿಕೊಂಡು ಬಂದಿದ್ದಾನೆ ಎನ್ನುವುದು ಪತ್ತೆಯಾಗಿದೆ ಎಂದು ಹೇಳಿದರು.

ತಾಲೂಕಿನ ಬಾಗೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದ ಪ್ರಕಾಶ್ ಬಂಧಿತ ಆರೋಪಿ ಆಗಿದ್ದು, ಈತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ 2 ಹಳೆಯ ಬೈಕ್ ಹಾಗೂ 4 ನೋಂದಣಿ ಆಗದ ಹೊಸ ಬೈಕನ್ನು ತುಮಕೂರು ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ಬಳ್ಳಾರಿ ಜಿಲ್ಲೆ ಹಾಗೂ ಹಾಸನ ಜಿಲ್ಲೆಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಆತನ ಬಳಿಯಿದ್ದ 1 ರಾಯಲ್ ಎನ್ ಪೀಲ್ಡ್, 1 ಅಪಾಚಿ, 4 ಹೋಂಡಾ ಆಕ್ಟೀವ ಬೈಕ್ ವಶಪಡಿಸಿ ಕೊಳ್ಳಲಾಗಿದೆ ಎಂದು ಎಎಸ್ಪಿ ಹೇಳಿದರು.

Comments are closed.