ಅಂತರಾಷ್ಟ್ರೀಯ

ಟಿವಿ ಶೋದಲ್ಲಿ ಪಾಕ್ ಶಾಸಕನಿಂದ ಮಹಿಳೆ ಮೇಲೆ ಹಲ್ಲೆಗೆ ಯತ್ನ

Pinterest LinkedIn Tumblr

attack

ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತ ಪಕ್ಷದ ಶಾಸಕನಾದ ಹಫೀಜ್ ಹಮ್ದುಲ್ಲಾ ಟಿವಿ ಕಾರ್ಯಕ್ರಮದ ನೇರಪ್ರಸಾರ ಚರ್ಚೆಯಲ್ಲಿ ಮಾತಿನ ಚಕಮಕಿ ನಡೆದು ಮಹಿಳಾ ಹಕ್ಕು ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ.

ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಹೆಸರಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಮಹಿಳೆಯರ ಸಾವಿನ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಮಹಿಳಾ ಕಾರ್ಯಕರ್ತೆ ಮಾರ್ವಿ ಸರ್ಮದ್ ವಿರುದ್ಧ ಅವಾಚ್ಯ ಪದಗಳ ಬಳಕೆ ಮಾಡಿ ಹಲ್ಲೆಗೆ ಯತ್ನಿಸಿದ ಎಂಬ ವಿಡಿಯೋ ಯುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಆಡಳಿತ ಪಕ್ಷದ ಶಾಸಕನಾಗಿ ಇಂತಹ ಕೃತ್ಯ ಎಸಗಿದ್ದಕ್ಕಾಗಿ ಗಡ್ಡಧಾರಿ ಶಾಸಕ ಹಫೀಜ್ ವಿರುದ್ಧ ಪ್ರತಿಭಟನೆ ಹೆಚ್ಚಾಗಿದೆ. ಕಳೆದ ವರ್ಷವೇ ಸುಮಾರು 1,100 ಮಹಿಳೆಯರನ್ನು ಮರ್ಯಾದಾ ಹತ್ಯೆ ಹೆಸರಲ್ಲಿ ಸಾಯಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೆ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮೃತ ಮಹಿಳೆಯ ಸಹೋದರನನ್ನು ಬಂಧಿಸಲಾಗಿತ್ತು. ಮಂಗಳವಾರದಿಂದ ಪಾಕ್ನಾದ್ಯಂತ ಮರ್ಯಾದಾ ಹತ್ಯೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು ಎಂದು ಫತ್ವಾ ಹೊರಡಿಸಿದೆ.

Comments are closed.