ಅಂತರಾಷ್ಟ್ರೀಯ

ತುಂಬಾ ಹಾಟ್ ಕಾಫಿ ಕುಡಿಯುದು ಹೆಚ್ಚಾದರೆ ಬರುತ್ತೆ ಕ್ಯಾನ್ಸರ್ ! ಏನಿದು ವಿಷಯ …ಮುಂದೆ ಓದಿ…

Pinterest LinkedIn Tumblr

hot coffee

ಲಂಡನ್: ತುಂಬಾ ಹಾಟ್ ಆಗಿರುವ ಕಾಫಿ ಕುಡಿಯುತ್ತೀರಾ! ಹಾಗಾದರೆ ಹುಷಾರು. ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕಾಫಿ ಸಂಭವನೀಯ ಕ್ಯಾನ್ಸರ್ ಜನಕ ಅಲ್ಲ ಎಂದಿದೆ. ಆದರೆ ಅದನ್ನು ಸಂಪೂರ್ಣವಾಗಿ ಒಪ್ಪುವಂತಹ ದಾಖಲೆಗಳು ಲಭ್ಯವಿಲ್ಲ. ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನೆ ಏಜೆನ್ಸಿ (ಐಎಆರ್ಸಿ) ಪ್ರಕಾರ ತುಂಬಾ ಬಿಸಿಯಿರುವ ಕಾಫಿ ಕುಡಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎನ್ನುವುದು ಅಧ್ಯಯನ ಹೇಳುತ್ತಿದೆ.

ಚೀನಾ, ಇರಾಕ್ ಯುರೋಪ್ ಸೇರಿದಂತೆ ಕೆಲ ಉತ್ತರ ಅಮೆರಿಕ ರಾಷ್ಟ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಿಸಿ ಪಾನೀಯ ನೀಡುತ್ತಾರೆ. ಐಎಆರ್ಸಿ ಸಂಶೋಧಕರು ಹೇಳುವಂತೆ ಕಾಫಿ ಸೇರಿದಂತೆ ಹೆಚ್ಚಿನ ಪಾನೀಯಗಳು ಉಷ್ಣಗಾಯ ಉಂಟುಮಾಡಿ ದೇಹದಲ್ಲಿ ಗಡ್ಡೆಗಳು ಉತ್ಪತ್ತಿಯಾಗಿ ಕ್ಯಾನ್ಸರ್ಗೆ ಕಾರಣವಾಗುತ್ತವೆ. ಆದರೆ ಬಿಸಿಯಾದ ಆಹಾರ ಸೇವನೆಯಿಂದ ಹೀಗಾಗುವುದಿಲ್ಲ ಎಂದಿದ್ದಾರೆ.

ದುಶ್ಚಟಗಳಿಂದ ನೀವು ದೂರವಿದ್ದು ಬಿಸಿಯಾದ ಪದಾರ್ಥ ಸೇವನೆ ಮಾಡಿದಲ್ಲಿ ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿ ಮುಖ್ಯಸ್ಥ ಡಾ.ಓಟಿಸ್ ಹೇಳಿದ್ದಾರೆ.

Comments are closed.