ಬೆಂಗಳೂರು, ಜೂ. ೭- ಮಾಜಿ ಗ್ರಾ.ಪಂ. ಸದಸ್ಯನನ್ನು ಬರ್ಬರವಾಗಿ ಹತ್ಯೆಗೈದಿರುವ ದುರ್ಘಟನೆ ರಾಜಾನುಕುಂಟೆ ವ್ಯಾಪ್ತಿಯ ಶ್ರೀರಾಮನಹಳ್ಳಿ ಬಳಿ ನಡೆದಿದೆ.
ಶ್ರೀರಾಮನಹಳ್ಳಿಯ ನಿವಾಸಿ ತಿರುಪತಯ್ಯ (50) ಮೃತ ದುರ್ದೈವಿ.
ಸೀನ, ಮುನಿಕೃಷ್ಣ, ನಾಗರಾಜು ಹತ್ಯೆಗೈದ ಆರೋಪಿಗಳಾಗಿದ್ದಾರೆ.
ಈತ ಮಾಜಿ ಗ್ರಾಪಂ ಸದಸ್ಯನಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ. 1.5 ಲಕ್ಷ ರೂ. ಹಣಕಾಸಿನ ವಿಚಾರವಾಗಿ ಸೀನ, ಮುನಿಕೃಷ್ಣ ಮತ್ತು ನಾಗರಾಜು ಅವರುಗಳ ಜತೆ ನಿನ್ನೆ ಸಂಜೆ 6ರ ಸುಮಾರಿಗೆ ಹಣಕಾಸಿನ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿ ಆರೋಪಿಗಳು, ತಿರುಪತಯ್ಯನ ಮೇಲೆ ಚಾಕು ಹಾಗೂ ದೊಣ್ಣೆಗಳಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ.
ನಂತರ ತಿರುಪತಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ರಾಜಾನುಕುಂಟೆ ಪೊಲೀಸರು, ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಕೊಲೆ ನಡೆದ 10 ಗಂಟೆಗಳ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
Uncategorized
Comments are closed.