ಕರ್ನಾಟಕ

ತಂದೆಯನ್ನು ಕೊಲ್ಲಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಗ

Pinterest LinkedIn Tumblr

2

ಹಾಸನ: ತಾಲೂಕಿನ ತಟ್ಟೆಕೆರೆಯಲ್ಲಿ ಭಾನುವಾರ ರಾತ್ರಿ ಕಿಡಿಗೇಡಿ ಮಗನೊಬ್ಬ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತನ್ನ ತಂದೆ ಸೇರಿ ಮನೆಯವರನ್ನು ಕೊಲ್ಲಲು ಯತ್ನಿಸಿದ್ದಾನೆ. ಗ್ರಾಮದ ನಿವಾಸಿ ಕೃಷ್ಣೇಗೌಡ ಅವರ ಮೊದಲ ಪತ್ನಿ ಪುತ್ರ ದೀಪು ಎಂಬಾತನೇ ಆರೋಪಿ. ಘಟನೆಯಲ್ಲಿ 2 ಜಾನುವಾರುಗಳು ಮೃತಪಟ್ಟಿದ್ದು, ಮನೆ ಬಹುತೇಕ ಸುಟ್ಟು ಭಸ್ಮವಾಗಿದೆ.

ಮೊದಲ ಪತ್ನಿ ವಸಂತ 20 ವರ್ಷಗಳ ಹಿಂದೆಯೇ ಕಾರಣಾಂತರಗಳಿಂದ ಬೇರೆ ವಾಸ ಆರಂಭಿಸಿದ್ದರಿಂದ ಕೃಷ್ಣೇಗೌಡ ಶೋಭಾ ಎಂಬುವರನ್ನು ಎರಡನೇ ಮದುವೆಯಾಗಿದ್ದರು.

ಮೊದಲ ಪತ್ನಿಯ ಮಗ ದೀಪು ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ತಂದೆ ಮನೆಗೆ ಬಂದು ಜಗಳವಾಡುತ್ತಿದ್ದ. ಭಾನುವಾರ ರಾತ್ರಿ ಜಗಳ ತಾರಕ್ಕೇರಿತ್ತು. ಆದರೆ ಕುಟುಂಬ ಸದಸ್ಯರೆಲ್ಲ ಸೇರಿ ಆತನನ್ನು ಸಮಾಧಾನಪಡಿಸಿ ಕಳುಹಿಸಿದ್ದರು.

ತಂದೆ ವಿರುದ್ಧ ಆಕ್ರೋಶಗೊಂಡಿದ್ದ ಆತ ತಡರಾತ್ರಿ ಆಗಮಿಸಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಮನೆಯ ಸದಸ್ಯ ರೆಲ್ಲರೂ ಬೇರೆಡೆ ಮಲಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ 1 ಕರು, ಕುರಿ, 90 ಸಾವಿರ ರೂ. ನಗದು, ಚಿನ್ನಾಭರಣ ಸೇರಿ ಗೃಹೋಪಯೋಗಿ ವಸ್ತುಗಳೆಲ್ಲ ಸುಟ್ಟು ಹೋಗಿವೆ. ಸಿದ್ದಯ್ಯನಗರದ ದಲಿತ ಮುಖಂಡ ಪುಟ್ಟರಾಜು ಎಂಬಾತನ ಕುಮ್ಮಕ್ಕಿನಿಂದಲೇ ದೀಪು ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಕೃಷ್ಣೇಗೌಡನ ಪತ್ನಿ ಶೋಭಾ ಆರೋಪಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.