ಕರ್ನಾಟಕ

ಯುಪಿಎಸ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸೆಕೆಂಡ್ ಬಂದ ಮೈಸೂರಿನ ಶ್ರೀಕಾಂತ್

Pinterest LinkedIn Tumblr

shreekanth

ಮೈಸೂರು: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕರ್ನಾಟಕದ 30 ಮಂದಿ ಪಾಸಾಗಿದ್ದು, ಇದ್ರಲ್ಲಿ ಮೈಸೂರಿನ ಶ್ರೀಕಾಂತ್ 56ನೇ ಶ್ರೇಯಾಂಕ ಗಳಿಸಿ ರಾಜ್ಯಕ್ಕೆ ಸೆಕೆಂಡ್ ಟಾಪರ್ ಆಗಿದ್ದಾರೆ.

ಮೈಸೂರಿನ ರಾಮಕೃಷ್ಣನಗರದ ನಿವಾಸಿಯಾಗಿರುವ ಶ್ರೀಕಾಂತ್ ಈ ಹಿಂದೆ ಮೂರು ಬಾರಿ ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಂಡಿದ್ರು. ಆದ್ರೆ, ನಾಲ್ಕನೇ ಬಾರಿ ಇಂತಹ ದೊಡ್ಡ ಸಾಧನೆ ಮಾಡಿದ್ದಾರೆ. ಮಗನ ಸಾಧನೆ ಶ್ರೀಕಾಂತ್ ಪೋಷಕರಿಗೆ ಸಂತಸವನ್ನುಂಟು ಮಾಡಿದೆ.

ಮಗನ ಈ ಸಾಧನೆಯನ್ನ ಕೊಂಡಾಡಿ ಸಹಿ ತಿನಿಸಿದ ಪೋಷಕರು ಇದು ನಮ್ಮ ಮಗನ ಪರಿಶ್ರಮಕ್ಕೆ ಸಿಕ್ಕ ಪ್ರಶಸ್ತಿ ಎಂದು ಸಂತಸವನ್ನು ಹಂಚಿಕೊಂಡರು.

Write A Comment