ಮಡಿಕೇರಿ: ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಪಾಸ್ ಪೋರ್ಟ್ ಸೇವಾ ಸೌಲಭ್ಯಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ನಗರದ ಹಳೇ ಕೋಟೆ ವಿಧಾನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಪಾಸ್ ಪೋರ್ಟ್ ಶಿಬಿರಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಕೊಡಗಿನವರು ಪಾಸ್ ಪೋರ್ಟ್ ಪಡೆಯಲು ಮಂಗಳೂರು, ಬೆಂಗಳೂರಿಗೆ ತೆರಳಬೇಕಾಗಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಸಂಸದ ಪ್ರತಾಪ್ ಸಿಂಹರ ಪ್ರಯತ್ನದಿಂದ ಜಿಲ್ಲಾ ಕೇಂದ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಸೌಲಭ್ಯ ಆರಂಭಿಸಲು ಚಿಂತನೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ಪಾಸ್ಪೋರ್ಟ್ ಸೇವಾ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕರು ಮನವಿ ಮಾಡಿದರು.
ಪಾಸ್ಪೋರ್ಟ್ ಪಡೆಯಬೇಕಾದವರು ಜನನ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಮತ್ತಿತರವನ್ನು ತರುವಂತಾಗಬೇಕು. 21 ದಿನದಲ್ಲಿ ಪಾಸ್ಪೋರ್ಟ್ ಪಡೆಯಲು ಅವಕಾಶವಿದೆ ಎಂದರು.
ರಾಜ್ಯದ ಪ್ರಾದೇಶಿಕ ಪಾಸ್ಪೋರ್ಟ್ ಸೇವಾ ಇಲಾಖೆಯ ಅಧಿಕಾರಿ ಕಾರ್ತಿಕೇಯನ್ ಮಾತನಾಡಿ , ಕೊಡಗು, ಮೈಸೂರು, ಹಾಸನ ಜಿಲ್ಲೆೆಯವರಿಗೆ ಪಾಸ್ಪೋರ್ಟ್ ಪಡೆಯಲು ಅವಕಾಶ ಮಾಡಲಾಗಿದೆ ಎಂದರು.
ಪೊಲೀಸ್ ಇಲಾಖೆಯವರು ಪಾಸ್ಪೋರ್ಟ್ಗೆ ಸಂಬಂಧಿಸಿದಂತೆ ಆದಷ್ಟು ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ವರದಿ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 6.20 ಲಕ್ಷ ಮಂದಿಗೆ ಪಾಸ್ಪೋರ್ಟ್ ವಿತರಿಸಲಾಗಿದೆ. ಜಿಲ್ಲೆೆಯಲ್ಲಿ ಸುಮಾರು 225 ಪಾಸ್ಪೋರ್ಟ್ ನೋಂದಣಿಗೆ ಅರ್ಜಿ ಸಲ್ಲಿಕೆಯಾಗಿದ್ದು, 190 ಅರ್ಜಿಗಳು ಸ್ವೀಕೃತವಾಗಿವೆ. ಶನಿವಾರ ಮಧ್ಯರಾತ್ರಿ 12 ಗಂಟೆವರೆಗೆ ನೋಂದಣಿ ಮಾಡಬಹುದಾಗಿದೆ ಎಂದು ಕಾರ್ತಿಕೇಯನ್ ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಪಾಸ್ಪೋರ್ಟ್ ಸೇವಾ ಸಂಸ್ಥೆೆ ವತಿಯಿಂದ ನಡೆಯುವ ಪಾಸ್ಪೋರ್ಟ್ ಸೇವಾದ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯುವಂತೆ ಶಾಸಕ ಎಂ.ಪಿ.ಅಪ್ಪರಂಜನ್ ತಿಳಿಸಿದರು.
ಜಿಲ್ಲೆೆಯು ಸೇರಿದಂತೆ ಮೈಸೂರು, ಹಾಸನ ಭಾಗದಲ್ಲಿರುವ ಜನರಿಗೆ ಪಾಸ್ಪೋರ್ಟ್ ಅನ್ನು ಕೊಡವಲ್ಲಿ ಸೇವಾ ಕೇಂದ್ರಗಳನ್ನು ಏರ್ಪಡಿಸಿದ್ದು ಆದಷ್ಟು ಸುಲಭ ಮತ್ತು ವೇಗವಾಗಿ ಪಾಸ್ಪೋರ್ಟ್ ಕೊಡಿಸುವಲ್ಲಿ ವ್ಯವಸ್ಥೆೆ ಮಾಡಲಾಗಿದೆ. ಇದರ ಸದ್ಬಳಕೆಯನ್ನು ಪ್ರತಿಯೊಬ್ಬರು ಪಡೆಯುವಂತೆ ಆಗಬೇಕು ಎಂದರು.
ಅಂತರ್ಜಾಲದಲ್ಲಿ ಪಾಸ್ಪೋರ್ಟ್ಗೆ ಸಂಬಂಧ ದಾಖಲೆಗಳನ್ನು ಮಾಡುವುದರ ಜತೆಗೆ ಜನನ ದಾಖಲೆ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ವೋಟರ್ ಐಡಿ ಅಥವಾ ಆಧಾರ್ ಕಾರ್ಡ್, ಬ್ಯಾಾಂಕ್ ಪಾಸ್ ಬುಕ್ ಮತ್ತು ಭಾವಚಿತ್ರಗಳನ್ನು ನೀಡಿ ಪಾಸ್ ಪೋರ್ಟ್ಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪಾಸ್ ಪೋರ್ಟ್ ದಾಖಲೆಗಳ ವೆರಿಫಿಕೇಷನ್ ವ್ಯವಸ್ಥೆೆ ಶೀಘ್ರವಾಗಿ ಆಗಬೇಕು. ಈ ಸಂಬಂಧ ಪೋಲಿಸ್ ಇಲಾಖೆ ಜವಾಬ್ದಾಾರಿಯಿಂದ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಸಂಸದರ ಆಪ್ತ ಸಹಾಯಕ ಪ್ರದೀಪ್ ಉತ್ತಯ್ಯ, ಎನ್ಐಸಿಯ ಅಧಿಕಾರಿ ಅಜಿತ್, ಪಾಸ್ ಪೋರ್ಟ್ ಸೇವಾ ಕೇಂದ್ರದ ಬಾಲಾಜಿ, ಪ್ರಕಾಶ್ ಇದ್ದರು.