ಕರ್ನಾಟಕ

ಸಿದ್ದರಬೆಟ್ಟಕ್ಕೆ ಹೋಗಿದ್ದ ಪ್ರೇಮಿಗಳನ್ನು ವಿವಸ್ತ್ರಗೊಳಿಸಿದ್ದ ವಿಕೃತಕಾಮಿ ಅರೆಸ್ಟ್

Pinterest LinkedIn Tumblr

Bheemraj

ತುಮಕೂರು: ವಾಯು ವಿಹಾರಕ್ಕೆಂದು ಜಿಲ್ಲೆಯ ಸಿದ್ದರಬೆಟ್ಟಕ್ಕೆ ಹೋಗಿದ್ದ ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ಪೈಶಾಚಿಕ ಕೃತ್ಯವೆಗಿದ್ದ ಭೀಮರಾಜ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟಕ್ಕೆ ಕಳೆದ ಭಾನುವಾರ ಪ್ರೇಮಿಗಳು ಹೋಗಿದ್ದರು. ಈ ವೇಳೆ ಅಪರಿಚಿತ ಖಾಕಿ ವೇಷಾಧಾರಿ ಭೀಮರಾಜ್ ವಿವಸ್ತ್ರಗೊಳಿಸಿ ಯುವತಿ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಬಳಿಕ ಪ್ರೇಮಿಗಳ ಬಟ್ಟೆ ಸಮೇತ ಪರಾರಿಯಾಗಿದ್ದ.

ಪ್ರಕರಣದ ದೂರು ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿ ಭೀಮರಾಜ್‍ನನ್ನು ಮಧುಗಿರಿಯಲ್ಲಿ ರಾತ್ರಿ ಬಂಧಿಸಿದ್ದಾರೆ. ಆರೋಪಿ ಭೀಮರಾಜ್ ತುಮಕೂರು ಸಮೀಪದ ಅರೆಗುಜ್ಜನಹಳ್ಳಿ ಮೂಲದವನೆಂದು ತಿಳಿದು ಬಂದಿದೆ.

Write A Comment