ಮನೋರಂಜನೆ

ಪಲ್ಲವಿ ಸಿನಿಮಾಕ್ಕೆ ಏಷ್ಯಾ ವಿಭಾಗದಲ್ಲಿ ಇಫ್ವಾ ಪ್ರಶಸ್ತಿ

Pinterest LinkedIn Tumblr

11ಗಾಯಕಿ, ನಟಿ ಎಂ.ಡಿ. ಪಲ್ಲವಿ ಮತ್ತು ಶಮಿಕ್‌ ಸೇನ್‌ ನಿರ್ದೇಶನದ “ಪ್ಲೇಗ್ರೌಂಡ್ಸ್‌’ ಕಿರು ಚಿತ್ರ ಹಾಂಗ್‌ ಕಾಂಗ್‌ನಲ್ಲಿ ನಡೆದ “ಇನ್‌ಕ್ಯುಬೇಟರ್‌ ಫಾರ್‌ ಫಿಲಂ ಆ್ಯಂಡ್‌ ವಿಶ್ಯುವಲ್‌ ಮೀಡಿಯಾ ಇನ್‌ ಏಶಿಯಾ (ಇಫ್ವಾ ) ಚಿತ್ರೋತ್ಸವದಲ್ಲಿ ಚಿನ್ನದ ಫ‌ಲಕ ಗೆದ್ದುಕೊಂಡಿದೆ. “ಏಶಿಯನ್‌ ನ್ಯೂ ಫೋರ್ಸ್‌’ ವಿಭಾಗದಡಿ ಈ ಪ್ರಶಸ್ತಿ ದೊರೆತಿದ್ದು ಇದು ಭಾರತದ ಚಿತ್ರಕ್ಕೇ ಮೊದಲು ಸಿಕ್ಕ ಗೆಲುವಾಗಿದೆ.

ಕಣ್ಣಾಮುಚ್ಚಾಲೆ ಆಡುತ್ತಿದ್ದ ಹುಡುಗ ಹಾಗೇ ನಿದ್ದೆ ಹೋಗಿ, ಮತ್ತೆ ಎಚ್ಚರಾಗುವ ಹೊತ್ತಿಗೆ ಅಲ್ಲಿನ ಸನ್ನಿವೇಶವೇ ಬದಲಾಗಿ ಹೋಗಿರುವುದು ಈ ಚಿತ್ರದ ಕಥಾವಸ್ತು. ಅವನು ವಾಪಾಸ್‌ ತನ್ನ ಮನೆಯನ್ನು ಹೇಗೆ ಸೇರುತ್ತಾನೆ ಅನ್ನುವ ಕಥಾಹಂದರವುಳ್ಳ ಈ ಸಿನಿಮಾ, ಇವತ್ತಿನ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನೂ ಅವಲೋಕಿಸುತ್ತದೆ.

ಎಂ.ಡಿ. ಪಲ್ಲವಿ ಮತ್ತು ಶಮಿಕ್‌ ಸೇನ್‌ ಗುಪ್ತಾ ಅವರು ಬರೆದ ಈ ಕತೆಯನ್ನು ಅವರೇ ನಿರ್ದೇಶಿಸಿದ್ದಾರೆ. ಈ ಚಿತ್ರ ಈಗಾಗಲೇ ಲಾಸ್‌ ಎಂಜಲೀಸ್‌ನ “ಇಫ್ಲಾ’, ಮುಂಬೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಮುಂಬೈನ ಥರ್ಡ್‌ ಐ ಚಿತ್ರೋತ್ಸವ, ಬೆಂಗಳೂರು, ಪುಣೆ ಕಿರು ಚಿತ್ಸೋತ್ಸವ, ಮಧುರೈ, ಪಾಂಡಿಚೆರಿ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ, ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ.
-ಉದಯವಾಣಿ

Write A Comment